ಪದವಿಧರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಪ್ರಚಾರದ ಪ್ರಯುಕ್ತ, ಪಶ್ಚಿಮ ಪಧವಿದರ ಕ್ಷೇತ್ರದ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಎಂ.ಕುಬೇರಪ್ಪ ಅವರು ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಪ್ರಚಾರ ಸಭೆ ನಡೆಸಿದರು.

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ‌ಸ್ವಾಗತ ಕೋರಿದರು ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳಾದ ಎಂ.ಕುಬೇರಪ್ಪ ಅವರನ್ನು ಗೆಲುವಿಗೆ ಶ್ರಮವಹಿಸುವುದಾಗಿ ತಿಳಿಸಿದರು…
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಮಾತನಾಡಿ, ಕೊರೋನಾ, ನೆರೆಹಾವಳಿಯಂತ ವಿಷಮ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು..ಅನುಭವಿಗಳಾದ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಎಂ.ಕುಬೇರಪ್ಪ ಅವರಿಗೆ ಮತನೀಡಿ ಅವರನ್ನು ಗೆಲ್ಲಿಸಿ ಸರ್ಕಾರ ಮಟ್ಟದಲ್ಲಿ ಧ್ವನಿ ಎತ್ತಲು ಸಹಕರಿಸುವಂತೆ ಕೇಳಿಕೊಂಡರು.

ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾನಾಡಿ, ಅಭ್ಯರ್ಥಿಗಳಾದ ಶ್ರೀ ಎಂ.ಕುಬೇರಪ್ಪ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿಗಳಾಗಿದ್ದಾರೆ, ತದನಂತರ ಅವರು ನಮ್ಮ ಪಕ್ಷ ಸೇರಿ ಶಿಕ್ಷಕರಿಗೆ, ಉಪನ್ಯಾಸರಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಒದಗಿಸುವಲ್ಲಿ ಹಾಗೂ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಭ್ಯರ್ಥಿಗಳಿಗೆ ನಮ್ಮ ಕ್ಷೇತ್ರದ ಹೆಚ್ಚಿನ ಮತ ನೀಡುವ ಮೂಲಕ ಅವರು ಮೇಲ್ಮನೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು….
ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಎಂ.ಕುಬೇರಪ್ಪ ಅವರು ಮಾತನಾಡಿ, ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇದ್ದೇನೆ ಹಾಗೂ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಪ್ರಯತ್ನದಿಂದ ಹಾಗೂ ನಮ್ಮ ಪಕ್ಷದ ಸಹಕಾರದಿಂದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಮಸ್ಯೆಗಳನ್ನು ಬಗೆಹರಿಸಿ, ಸವಲತ್ತುಗಳನ್ನು ಹಾಗೂ ಅನುದಾನಗಳನ್ನು ಒದಗಿಸಿದ್ದೇನೆ.. ಅದೇ ರೀತಿ ಈಗಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ರಾಜ್ಯದಲ್ಲಿರುವ ನಿರುದ್ಯೋಗಿ ಪದವೀಧರರಿಗೆ ಕನಿಷ್ಟ 1000ರೂ ಸ್ಟೈಫಂಡ್ ಒದಗಿಸುವ, ಅತಿಥಿ ಉಪನ್ಯಾಸಕರನ್ನು ಖಾಯಮಾತಿ ಮಾಡಲು, ಅನುದಾನರಹಿತ ಶಾಲೆಗಳಲ್ಲಿ ‌ಅನುದಾನಕ್ಕೊಳಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

RELATED ARTICLES  ಕುಮಟಾ ಜಾತ್ರೆಯ ಪ್ರಯುಕ್ತ ಯಕ್ಷಗಾನ ಪ್ರದರ್ಶನ: ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪ್ರದಾನ

ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಹೊನ್ನಪ್ಪ ನಾಯಕ ಮಾತನಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ತಿಳಿಸಿದರು ಹಾಗೂ ಶುಭಕೋರಿದರು.

RELATED ARTICLES  ಕುಮಟಾ ಗೋ ಪರಿವಾರದ ಸಭೆ : ಪದಾಧಿಕಾರಿಗಳ ಸೇರ್ಪಡೆ.

ಈ ಸಂದರ್ಭದಲ್ಲಿ ಕುಮಟಾ ಪದವೀಧರ ವಿಭಾಗದ ಅಧ್ಯಕ್ಷರಾದ ಆನಂದು ನಾಯಕ, ಮುಖಂಡರಾದ ನಾಗೇಶ್ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ಸುರೇಖಾ ವಾರೇಕರ್, ಮುಜಾಫರ್ ಸಾಬ್, ಯಶೋಧಾ ಶೆಟ್ಟಿ, ರೇವತಿ ನಾಯ್ಕ, ಅಬ್ಬಾಸ್ ಥೋಮ್ಸೆ, ಎಂ.ಟಿ, ನಾಯ್ಕ, ಎಸ್. ಎಂ.ಭಟ್, ಸಂತೋಷ ನಾಯ್ಕ, ಜಯಂತ ನಾಯ್ಕ, ಜಗದೀಶ್‌ ಹರಿಕಂತ್ರ, ಬಿ.ಜಿ.ಶ್ಯಾನಭಾಗ, ದೇವಪ್ಪ ನಾಯ್ಕ, ಹನುಮಂತ ಪಟಗಾರ, ವೀಣಾ ನಾಯಕ್, ರಮೇಶ ನಾಯ್ಕ, ಕೇಶವ ಪಟಗಾರ, ನಾಗರಾಜ್ ನಾಯ್ಕ, ಗಣಪತಿ ಶೆಟ್ಟಿ, ರಾಜೇಶ್ ಪ್ರಭು, ನಿತ್ಯಾನಂದ ನಾಯ್ಕ, ದತ್ತು ಶೆಟ್ಟಿ, ಬೀರಣ್ಣ ನಾಯಕ, ಸಚಿನ್ ನಾಯ್ಕ, ವಿಜಯ್ ವೆರ್ಣೇಕರ್, ನಾರಾಯಣ ನಾಯ್ಕ, ವಿನಾಯಕ ನಾಯ್ಕ, ರಾಜು ಅಂಬಿಗ, ಆನಂದು ಗೌಡ, ಗಜಾನನ ಕೋಡಿಯ, ದೇವು ಗೌಡ, ಯಶ್ವಂತ ನಾಯ್ಕ, ನಾಗಪ್ಪ ಹರಿಕಂತ್ರ, ಮೈಕೆಲ್, ಶಾಂತಾರಾಮ ನಾಯ್ಕ ಮುಂತಾದವರು ಹಾಜರಿದ್ದರು…