ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 10 ಜನರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಊರಕೇರಿಯ 75 ವರ್ಷದ ವೃದ್ಧ, ಚೌಡಗೇರಿಯ 63 ವರ್ಷದ ಪುರುಷ, ಹೋಳೆಗದ್ದೆಯ 25 ವರ್ಷದ ಯುವತಿ, ಕೋಡ್ಕಣಿಯ 21 ವರ್ಷದ ಯುವಕ,
ದಿವಗಿಯ 85 ವರ್ಷದ ವೃದ್ಧೆ, 58 ವರ್ಷದ ಮಹಿಳೆ, 84 ವರ್ಷದ ವೃದ್ಧ, 54 ವರ್ಷದ ಪುರುಷ, 49 ವರ್ಷದ ಪುರುಷ, 50 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದಿದೆ.

ತಾಲೂಕಿನ ದಿವಗಿ, ಹೊಳೆಗದ್ದೆ, ಕೊಡ್ಕಣಿ, ಊರಕೇರಿ, ಚೌಡಗೇರಿ ಭಾಗದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

RELATED ARTICLES  ಮೊರಬದ ಹಳ್ಳೇರ ಸಮಾಜದ ಹೆಂಗಳೆಯರ ಮನಸೂರೆಗೊಂಡ ಶಿವರಾತ್ರಿ ಸಂಭ್ರಮ.

ಹೊನ್ನಾವರದಲ್ಲಿ 12 ಜನರಿಗೆ ಕೊರೋನಾ

ಹೊನ್ನಾವರ ತಾಲೂಕಿನಲ್ಲಿ ಇಂದು 12 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ.

ಗುಂಡಬಳಾದ 32 ವರ್ಷದ ಮಹಿಳೆ, 61 ವರ್ಷದ ಮಹಿಳೆ, ಕರ್ಕಿಯ 23 ವರ್ಷದ ಯುವಕ, ಜಲವಳ್ಳಿಯ 17 ವರ್ಷದ ಯುವತಿ, 18 ವರ್ಷದ ಯುವಕ,ಗುಣವಂತೆಯ 66 ವರ್ಷದ ಮಹಿಳೆ, ಹಡಿನಬಾಳದ 21 ವರ್ಷದ ಯುವಕ, 15 ವರ್ಷದ ಬಾಲಕಿ, 65 ವರ್ಷದ ಮಹಿಳೆ, 37 ವರ್ಷದ ಪುರುಷ, 35 ವರ್ಷದ ಮಹಿಳೆ, 32 ವರ್ಷದ ಯುವತಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಶಿರಸಿಯಲ್ಲಿ 6 ದೃಢ

RELATED ARTICLES  ಬೆಂಕಿ ನಂದಿಸುವಾಗ ವಿದ್ಯತ್ ತಂತಿ ತಗುಲಿ ಅರಣ್ಯ ರಕ್ಷಕ ಸಾವು.

ಶಿರಸಿ ನಗರದಲ್ಲಿಂದು 6 ಕೊರೊನಾ ಕೇಸ್ ದಾಖಲಾಗಿದ್ದು, ಮೂರು ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿನ ಗೋಳಿ ಊರತೋಟದಲ್ಲಿ 2, ಕಾನಗೋಡಿನ ಗೋಪುರ 1, ಬನವಾಸಿಯ ತಿಗಣಿಯಲ್ಲಿ 1, ಪೆಡೆಂಬಿಳಿನಲ್ಲಿ 2 ಕೇಸ್ ಪಾಸಿಟಿವ್ ಬಂದಿದದೆ. ಈವರೆಗೆ 1377 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 1238 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಯಲ್ಲಾಪುರದಲ್ಲಿ ಯಾವುದೇ ಕೊರೊನಾ ಕೇಸ್ ಇಲ್ಲ.

ಯಲ್ಲಾಪುರಿಗರಿಗೆ ತುಸು ನೆಮ್ಮದಿಯಂಬಂತೆ ತಾಲೂಕಿನಲ್ಲಿ ಶನಿವಾರ ಒಂದು ಕೇಸು ಕೂಡಾ ದೃಢಪಟ್ಟಿಲ್ಲ. ಮತ್ತು ಇಂದು 12 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ವರೆಗೆ ಗುಣಮುಖರಾದವರ ಸಂಖ್ಯೆ 689 ಕ್ಕೇರಿದೆ.