ಭಟ್ಕಳ: ಕೊಂಕಣ ರೇಲ್ವೆಯ ರೋರೋ ರೈಲಿನಲ್ಲಿ ಸರಕು ತುಂಬಿದ ಲಾರಿ ಚಾಲಕ ಆಕಸ್ಮಿಕವಾಗಿ ರೈಲಿನಿಂದ ನೆಲಕ್ಕುರುಳಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೈಲೂರಿನ ಬಳಿ ನಡೆದಿದೆ.

ಗಾಯಗೊಂಡ ಲಾರಿ ಚಾಲಕನನ್ನು ಗುಜರಾತಿನ ಕ್ರೀಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.ಈತ ಗುಜರಾತಿನಿಂದ ಸುರತ್ಕಲ್ ಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ರೈಲಿನಿಂದ ನೆಲಕ್ಕುರುಳಿ ಬಿದ್ದಿದ್ದಾನೆ ಎನ್ನಲಾಗಿದೆ.

RELATED ARTICLES  ಹಬ್ಬದ ಕಳೆ‌ ಕಸಿದ ಮಳೆ : ವ್ಯಾಪಾರಿಗಳಿಗೂ ನಿರಾಸೆ.

ರೈಲಿನಿಂದ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಟ್ಯಾಂಕರ್

ಈ ಘಟನೆ ಬಗ್ಗೆ ಮುರುಡೇಶ್ವರ ಪಿ.ಎಸ್.ಐ. ಸಿ.ಆರ್. ಪುಟ್ಟಸ್ವಾಮಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.