ಭಟ್ಕಳ: ಆಧುನಿಕ ಯುಗದಲ್ಲಿ ನಗದು ರಹಿತ ವ್ಯವಹಾರಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು ಪ್ರತಿಯೊಬ್ಬರೂ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಗಿದೆ ಎಂದು ಬೆಳಕೆ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಕೃಷ್ಣನ್ ಹೇಳಿದರು.
ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನಮದ್ಲು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ, ಸಿಂಡಿಕೇಟ್ ಬ್ಯಾಂಕ್ ಬೆಳಕೆ ಜಂಟಿಯಾಗಿ ಆಯೋಜಿಸಿದ್ದ “ಗೋಯಿಂಗ್ ಡಿಜಿಟಲ್” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ದಯಾನಂದ ಗುಂಡು ಮಾತನಾಡಿ ಆರ್ಥಿಕ ಸಾಕ್ಷರತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸುಕನ್ಯ ಸಮೃದ್ದಿ ಯೋಜನೆ, ಅಟಲ್ ಪೆನ್ಷನ್ ಯೋಜನೆ ಹಾಗೂ ಬ್ಯಾಂಕುಗಳ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಬೆಳಕೆ ಗ್ರಾಮ ಪಂಚಾಯತ ಸದಸ್ಯ ನಾಗಪ್ಪ ನಾಯ್ಕ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಸವಿತಾ ಗೊಂಡ, ಯುವಕ ಸಂಘದ ಅಧ್ಯಕ್ಷ ಮಾದೇವ ಗೊಂಡ, ಗ್ರಾಮ ಪಂಚಾಯತ್ ಸದಸ್ಯೆ ಕೃಷ್ಣಿ ಗೊಂಡ, ಶಾಲಾ ಅಭಿವೃದ್ದಿ ಮತ್ತು ಮೇಲುಸ್ಥುವಾರಿ ಸಮಿತಿ ಅಧ್ಯಕ್ಷ ಗಣಪತಿ ಗೊಂಡ, ಉಪಾಧ್ಯಕ್ಷೆ ತಾರಾ ರಮೇಶ ನಾಯ್ಕ ಉಪಸ್ಥಿತರಿದ್ದರು.