ಲಯನ್ಸ್ ಕ್ಲಬ್ ಕುಮಟಾ ವತಿಯಿಂದ ಕಳೆದ ಮೂರು ದಿನಗಳಿಂದ ಹೊಲನಗದ್ದೆ, ಹನ್ನೆಮಠ,ಹಾಗೂ ತೆಪ್ಪ ಗ್ರಾಮಗಳಲ್ಲಿ ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ಹರಿಜನ ಕೇರಿಗಳಿಗೆ ಭೇಟಿ ನೀಡಿ ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದ ಕುರಿತು ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

RELATED ARTICLES  ಧರ್ಮಜಾಗೃತಿ ಸಮಿತಿ ವತಿಯಿಂದ ಹೊನ್ನಾವರದ ನ್ಯೂ ಇಂಗ್ಲೀಷ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಇದೇ ಸಂದರ್ಭದಲ್ಲಿ ಸುಮಾರು 300ಕ್ಕೂ ಹೆಚ್ಚು ಜನಗಳಿಗೆ ಉಚಿತ ಮಾಸ್ಕ್ ವಿತರಿಸಿ ಮಾಸ್ಕ್ ಧರಿಸುವ ವಿಧಾನದ ಬಗ್ಗೆ ತಿಳುವಳಿಕೆ ನೀಡಲಾಯಿತು.ಊರಿನ ಪ್ರಮುಖರಾದ ಶ್ರೀ ನಾಗರಾಜ ಪಟಗಾರ,ಗಜಾನನ ಪಟಗಾರ,ಗೋವಿಂದ ಪಟಗಾರ,ಪಾರ್ವತಿ,ರಂಜನ ಪಟಗಾರ ಶ್ರೀಮತಿ ಶನಟಿ ಮುಕ್ರಿ,ನಾಗಪ್ಪ ಮುಕ್ರಿ,ಧರ್ಮಸ್ಥಳ ಸಂಘದ ಪ್ರಮುಖೇ ಮಂಗಳಾ ನಾಯ್ಕ್ ಮುಂತಾದವರು ಹಾಜರಿದ್ದರು.ಲಯನ್ಸ್ ಅಧ್ಯಕ್ಷೆ ಶ್ರೀಮತಿ ವಿನಯಾ ಹೆಗಡೆ,ಕಾರ್ಯದರ್ಶಿ ಎಸ್.ಎಸ್ ಹೆಗಡೆ,ಖಜಾಂಚಿ ಎಂ.ಎನ್.ಹೆಗಡೆ ಉಪಸ್ಥಿತರಿದ್ದು,ಕಾರ್ಯಕ್ರಮ ನಡೆಯಿತು. ಈ ಅಭಿಯಾನ ಮುಂದುವರಿಯುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

RELATED ARTICLES  ಜ.8 ಕ್ಕೆ ಕುಮಟಾ ತಾಲೂಕಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ಸಭೆ