ಕುಮಟಾ : ದಿನಾಂಕ 18/10/2020 ರಂದು ಭಾನುವಾರ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಬಿ ಕೆ ಭಂಡಾರಕರ ಸರಸ್ವತಿ ಪದವಿ ಪೂರ್ವಕಾಲೇಜಿನಲ್ಲಿ ವಿಧಾತ್ರಿಯ ಉಪನ್ಯಾಸಕವೃಂದದವರೇ  ಸಿದ್ಧಪಡಿಸಿದ ವಿಜ್ಞಾನ ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತಾಮಾರ್ಗದರ್ಶಿ ಪುಸ್ತಕಗಳನ್ನು ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಅನಾವರಣ ಮಾಡಿದರು.ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಮಾಹಿತಿಯನ್ನು ಒದಗಿಸಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ರವರು ನವರಾತ್ರಿಯ ಸಂದರ್ಭದಲ್ಲಿ ಈ ಪುಸ್ತಕಗಳ ಬಿಡುಗಡೆ ಆಗಿದೆ ಲಕ್ಷ್ಮೀ ,ಸರಸ್ವತಿ, ಗೌರೀ  ದೇವತೆಗಳ ಆರಾಧನೆ ಒಂದೊಂದು ಅರ್ಥವಿದೆ.ಸರಸ್ವತಿಯ ಆರಾಧನೆಯು ಪುಸ್ತಕಗಳನ್ನು ಪೂಜಿಸುವಲ್ಲಿಗೇ ಮುಗಿಯುವುದಿಲ್ಲ ಅದನ್ನು ತೆರೆದು ಓದಿ ಜ್ಞಾನವನ್ನು ಪಡೆದಾಗ ಮಾತ್ರ ಪೂಜೆಯು ಫಲಿಸುತ್ತದೆ.ಆಹಾರ ಪದಾರ್ಥಗಳನ್ನು ಸಾಹಿತ್ಯಿಕವಾಗಿ ಎಷ್ಟೇ ವರ್ಣಿಸಿದರೂ ಅದರ ಸ್ವಾದ ಅದನ್ನು ಸವಿದರೆ ಮಾತ್ರವೇ ದೊರೆಯುತ್ತದೆ ಅಂತೆಯೇ ಪುಸ್ತಕವನ್ನು ಓದಿ ಅರ್ಥಮಾಡಿಕೊಂಡಾಗಲೇ ಅದರ ಸತ್ವ ತಿಳಿಯುವುದು.ಶತಕಗಳ ನಂತರ ಮತ್ತೊಮ್ಮೆ ನಾವೆಲ್ಲ ಅಯೋಮಯ ಸ್ಥಿತಿಯಲ್ಲಿ ಇದ್ದೇವೆ ಆದಷ್ಟು ಬೇಗ ಈ ದುರಿತಗಳು ದೂರವಾಗಿ ಸಹಜ ವಾತಾವರಣ ಸಿದ್ಧವಾಗಲಿ ಎಂದು ಆಶಿಸಿದರು. ಈ ಸಂಧರ್ಭದಲ್ಲಿ ವಿಶ್ವಸ್ಥರಾದ ರಮೇಶ ಪ್ರಭು ಪ್ರಾಚಾರ್ಯೆ ಡಾ ,ಸುಲೋಚನ ರಾವ್ ಬಿ.ವಿಧಾತ್ರಿಯ ಗುರುರಾಜ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

RELATED ARTICLES  ಮಂಗನಕಾಯಿಲೆಗೆ ಸೂಕ್ತ ಪರಿಹಾರ ಕಲ್ಪಿಸಿ - ಮಹಾಸಭೆ ಆಗ್ರಹ

ಡಾ,ಸುಲೋಚನ ರಾವ್ ಅವರು ಸ್ವಾಗತಿಸಿದರು ಉಪನ್ಯಾಸಕ ಪದ್ಮನಾಭ ಅವರು ಪ್ರಾರ್ಥಿಸಿದರು.ಗುರುರಾಜ್ ಶೆಟ್ಟಿ ಇವರು ವಂದನಾರ್ಪಣೆಗೈದರೆ ಉಪನ್ಯಾಸಕಿ ನಿಶಾ ಬ್ರಿಟ್ಟೋ ಕಾರ್ಯಕ್ರಮ ನಿರೂಪಿಸಿದರು

RELATED ARTICLES  ರೈತನ ಮೇಲೆ ಕರಡಿ ದಾಳಿ

ಈ ಪುಸ್ತಕಗಳನ್ನು ಸ್ವತಃ ವಿಧಾತ್ರಿಯ ಉಪನ್ಯಾಸಕ ವೃಂದದವರೇ ಸಿದ್ಧ ಪಡಿಸಿದ್ದು ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನ ಕಾರಿಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಸೂಕ್ತ ಚೌಕಟ್ಟಿನಲ್ಲಿ ಸಿದ್ಧಗೊಂಡಿರುವ ಪುಸ್ತಕಗಳು ಉತ್ಕೃಷ್ಟವಾದ ಗುಣಮಟ್ಟವನ್ನು ಹೊಂದಿದ್ದು ಸಿ ಇ ಟಿ.ಜೆಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾರ್ಗದರ್ಶನ್ನೂ ನೀಡುವಂಥದ್ದಾಗಿದೆ ಶಿಕ್ಷಣ ಕೇತ್ರದಲ್ಲಿ‌ ಸಂಗ್ರಹ ಯೋಗ್ಯ ವಾದ ಈ ಪುಸ್ತಕ ಗಳ ಅನಾವರಣ ಕಾರ್ಯಕ್ರಮನ್ನು ಆನ್ ಲೈನ್ ಮೂಲಕ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡು ವಿಕ್ಷಣೆ ಮಾಡಿದ್ದರು..