ಹೊನ್ನಾವರ : ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ಇದರಲ್ಲಿ ಶಿವಾನಂದ ಹೆಗಡೆ ಕಡತೋಕಾ ಅವರ ತಂಡ ಜಯಭೇರಿ ಬಾರಿಸಿದೆ.
ಡೆಲಿಗೇಟ್ ಸದಸ್ಯರು ಹಾಗೂ “ ಬ” ವರ್ಗದ ಬಿಡಿ ಸದಸ್ಯರಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ
ಪಂಗಡ/ ಹಿಂದುಳಿದ ಅ ವರ್ಗ/ ಮಹಿಳೆಯರಿಗೆ ಮೀಸಲಿರಿಸಿದ ಟಿ.ಎ.ಪಿ.ಸಿ.ಎಮ್.ಎಸ್ ಹೊನ್ನಾವರ
ಪ್ರದೇಶ ಮತಕ್ಷೇತ್ರದಿಂದ ಸಹಕಾರ ಸಂಘ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಇದಾಗಿತ್ತು.
ಈ ಚುನಾವಣೆಯಲ್ಲಿ ಶಿವಾನಂದ ಹೆಗಡೆ ಕಡತೋಕಾ ಹಾಗೂ ಬೆಂಬಲಿಗರು ಜಯಗಳಿಸುವ ಮೂಲಕ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ.
ಜಯಗಳಿಸಿದವರ ಯಾದಿ ಇಲ್ಲಿದೆ.