ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 94 ಕರೊನಾ ಕೇಸ್ ದಾಖಲಾಗಿದೆ. ಜಿಲ್ಲಾಡಳಿತದಿಂದ ಬಂದಿರುವ ಮಾಹಿತಿಯಂತೆ ಇಂದು ಬಂದಿರುವ ಕೊರೋನಾ ಕೇಸ್ ಎರಡಂಕಿಗೇ ಸೀಮಿತವಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಉತ್ತರ ಕನ್ನಡದ ಪ್ರಮುಖ ತಾಲೂಕುಗಳಾದ
ಕಾರವಾರ 6, ಅಂಕೋಲಾ 5, ಕುಮಟಾ 8, ಹೊನ್ನಾವರ 7, ಶಿರಸಿ 10, ಸಿದ್ದಾಪುರ 2, ಯಲ್ಲಾಪುರ 1, ಮುಂಡಗೋಡ 49, ಹಳಿಯಾಳ 5 ಮತ್ತು ಜೋಯ್ಡಾದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

RELATED ARTICLES  ನದಿಯ ಕಂದಕ್ಕೆ ಬಿತ್ತು ಕಬ್ಬಿಣ ತುಂಬಿದ ಲಾರಿ: ಯಲ್ಲಾಪುರದಲ್ಲಿ ನಸುಕಿನಲ್ಲಿ ನಡೆದ ಅವಘಡ

ಅಂಕೋಲಾ 5, ಕಾರವಾರ 8, ಕುಮಟಾ 11, ಹೊನ್ನಾವರ 29, ಶಿರಸಿ 14, ಮುಂಡಗೋಡಿನಲ್ಲಿ 38 ಮಂದಿ ಅಂದರೆ ಇಂದು ವಿವಿಧ ಆಸ್ಪತ್ರೆಯಿಂದ 105 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

RELATED ARTICLES  ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದಿ ನಡೆದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ.

ಇಂದು 94 ಪ್ರಕರಣ ದಾಖಲಾದ ಬೆನ್ನಲ್ಲೆ, ಸೋಂಕಿತರ ಸಂಖ್ಯೆ 12, 312ಕ್ಕೆ ಏರಿಕೆಯಾಗಿದೆ, ಹೋಮ್ ಐಸೋಲೇಷನ್ ನಲ್ಲಿ 461 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. . ಇದುವರೆಗೂ 160 ಮಂದಿ ಮೃತಪಟ್ಟಿದ್ದಾರೆ.