ಕಾರವಾರ: ವಿಟಿಯು ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಪರ ಜಿಲ್ಲಾಧಿಕಾರಿ (ಎಡಿಸಿ) ಎಚ್.ಪ್ರಸನ್ನ ಅವರು ಕುಪಿತಗೊಂಡ ಘಟನೆ ನಡೆದಿದೆ.

ವಿಟಿಯು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಕಚೇರಿ ಒಳಗೆ ಬಿಡದ ಪೊಲೀಸರು ಆವರಣದ ಬಾಗಿಲು ಮುಚ್ಚಿ ತಡೆದಿದ್ದರು. ಈ ವೇಳೆ ಸಮಸ್ಯೆ ಆಲಿಸಲು ಕಚೇರಿಯಿಂದ ಕೆಳಗಿಳಿದು‌ ಬಂದಿದ್ದ ಎಡಿಸಿಯವರಿಗೆ ‘ನಾವು ಒಂದು ಗಂಟೆಯಿಂದ ಇಲ್ಲಿ ಕಾಯುತ್ತಿದ್ದೇವೆ. ನಿಮಗೆ ಬಂದು ಮನವಿ ತೆಗೆದುಕೊಳ್ಳಲು ಆಗುವುದಿಲ್ಲವೇ’ ಎಂದು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ್ದಾಳೆ. ಇದರಿಂದ ಕುಪಿತಗೊಂಡ ಎಚ್.ಪ್ರಸನ್ನ, ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದಾರೆಯೇ ಎಂದು ಪೊಲೀಸರ ಬಳಿ ಕೇಳಿ, ಕೋಪಗೊಂಡು ನಾಲ್ವರು ವಿದ್ಯಾರ್ಥಿಗಳಿಗೆ ಕಚೇರಿಗೆ ಬರುವಂತೆ ತಿಳಿಸಿದರು.
ಇದರಿಂದ ವಿದ್ಯಾರ್ಥಿಗಳು ಕೂಡ ಸಿಟ್ಟಾದರು. ಎಡಿಸಿಯವರು ಸ್ಥಳಕ್ಕೆ ಬಂದು ಮನವಿ ಪಡೆಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದು ಪ್ರತಿಭಟನೆ ಇನ್ನಷ್ಟು ಅಧಿಕಗೊಳಿಸಿದರು. ಬಳಿಕ ಕಾರ್ಯದ ನಿಮಿತ್ತ ಎಡಿಸಿಯವರು ಬೇರೆಡೆ ತೆರಳಿದ್ದರು. ಈ ವೇಳೆ ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು.
‘ಜನರ ಸಮಸ್ಯೆಗಳನ್ನು ಆಲಿಸಬೇಕಾಗಿರುವ ಜಿಲ್ಲಾಧಿಕಾರಿಯವರು ಈ ರೀತಿ ವರ್ತಿಸಿರುವುದು ಖಂಡನೀಯ. ವಿದ್ಯಾರ್ಥಿಗಳು ತಮ್ಮ ಸಮಸ್ಯೆ ವಿರುದ್ಧ ಪ್ರಶ್ನಿಸುವ ಹಕ್ಕಿದೆ. ಜಿಲ್ಲಾಧಿಕಾರಿಗಳು ಇದು ಎರಡನೇಯ ಬಾರಿ ಈ ರೀತಿ ವಿದ್ಯಾರ್ಥಿಗಳೊಂದಿಗೆ ವರ್ತಿಸಿದ್ದಾರೆ’ ಎಂದು ಎಬಿವಿಪಿ ಜಿಲ್ಲಾಸಂಚಾಲಕ ಸಿದ್ದು ಮದರಕಂಡಿ ಹೇಳಿದರು.
‘ಅಧಿಕಾರಿಗಳಿಗೆ ನೂರೆಂಟು ಕಾರ್ಯವಿರುತ್ತದೆ. ಅದರಲ್ಲಿಯೂ ಅವರು ಬೀಡುವು ಮಾಡಿ ಮನವಿ ಸ್ವೀಕರಿಸಲು ಬಂದರೆ ವಿದ್ಯಾರ್ಥಿಗಳು ಈ ರೀತಿ ವರ್ತಿಸಿರುವುದು ಸರಿಯಲ್ಲ’ ಎಂದು ಕೆಲವರು ಗೊಣಗಿದರು.

RELATED ARTICLES  ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಜಿಲ್ಲಾ ಪ್ರವಾಸ ನಾಳೆಯಿಂದ.