ಕುಮಟಾ: ತಾಲೂಕಿನಲ್ಲಿ ಇಂದು 13 ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.
ಹಳೆ ಮೀನು ಮಾರುಕಟ್ಟೆಯ 53 ವರ್ಷದ ಮಹಿಳೆ, ಕೆ.ಎಸ್.ಆರ್.ಟಿ.ಸಿ ಕ್ವಾಟ್ರಸ್‌ನ 22 ವರ್ಷದ ಪುರುಷ, ಮುರೂರಿನ 37 ವರ್ಷದ ಮಹಿಳೆ, ಮಳವಳ್ಳಿಯ 41 ವರ್ಷದ ಪುರುಷ, 35 ವರ್ಷದ ಪುರುಷ,ಪಟ್ಟಣ ವ್ಯಾಪ್ತಿಯ ಬಸ್ತಿಪೇಟೆಯ 52 ವರ್ಷದ ಪುರುಷ, 45 ವರ್ಷದ ಪುರುಷ, ಮೂರುಕಟ್ಟೆಯ 28 ವರ್ಷದ ಪುರುಷ, ಹಣ್ಣೇಮಠದ 32 ವರ್ಷದ ಪುರುಷ, 10 ವರ್ಷದ ಬಾಲಕ, ಶಶಿಹಿತ್ಲದ 53 ವರ್ಷದ ಪುರುಷ, ಉಪ್ಪಾರಕೇರಿಯ 60 ವರ್ಷದ ವೃದ್ಧ, 56 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 13 ಹೊಸ ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 1635 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 10 ಕೇಸ್
ಹೊನ್ನಾವರ ತಾಲ್ಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ದೃಢಪಟ್ಟಿದೆ. ಮಾಡಗೇರಿಯ 57 ವರ್ಷದ ಮಹಿಳೆ, 30 ವರ್ಷದ ಮಹಿಳೆ, 2 ವರ್ಷದ ಮಗು, ಚಂದ್ರಾಣಿಯ 50 ವರ್ಷದ ಮಹಿಳೆ, 20 ವರ್ಷದ ಯುವಕ, ಪಟ್ಟಣದ ಪ್ರಭಾತನಗರದ 68 ವರ್ಷದ ಪುರುಷ,ದುಗ್ಗುರಿನ 25 ವರ್ಷದ ಯುವಕ, ನಗರಬಸ್ತಿಯ 71 ವರ್ಷದ ಪುರುಷ, ಪಟ್ಟಣದ ಬ್ಯಾಂಕ್ ಉದ್ಯೋಗಿ 33 ವರ್ಷದ ಪುರುಷ, ಪಟ್ಟಣದ 3 ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ.
ಶಿರಸಿಯಲ್ಲಿಂದು 9 ಮಂದಿಯಲ್ಲಿ ಕೊರೊನಾ ದೃಢ
ಶಿರಸಿ: ನಗರದಲ್ಲಿ ಬುಧವಾರ 9 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದಾರೆ.
ಇಂದು ವಾನಳ್ಳಿಯ ವಾಚಗದ್ದೆಯಲ್ಲಿ 1, ಮಾರಿಕಾಂಬಾ ನಗರದಲ್ಲಿ 1, ಮರಾಠಿಕೊಪ್ಪದ ನವನಗರದಲ್ಲಿ 1, ದೇವನಳ್ಳಿಯಲ್ಲಿ 1, ಮಾರುಕಟ್ಟೆ ಪೊಲೀಸ್ ಠಾಣೆ ಕ್ವಾಟರ್ಸ್‍ನಲ್ಲಿ 3, ಕಾಗೋಡಿನಲ್ಲಿ 1, ಸಾಲ್ಕಣಿ ಮೇಲಿನಕೇರಿಯ ಒಬ್ಬರಲ್ಲಿ ಕೊರೊನಾ ದೃಢಪಟ್ಟಿದೆ.
ಈವರೆಗೆ ಒಟ್ಟೂ 1410 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 1271 ಮಂದಿ ಗುಣಮುಖರಾಗಿದ್ದಾರೆ. 861 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಲ್ಲಾಪುರದಲ್ಲಿಂದು ಇಬ್ಬರಿಗೆ ಕೊರೊನಾ ದೃಢ
ಯಲ್ಲಾಪುರ: ಪಟ್ಟಣದಲ್ಲಿಂದು ಇಬ್ಬರಿಗೆ ಕೊರೊನಾ ಧೃಢಪಟ್ಟಿದ್ದು, 9 ಮಂದಿ ಗುಣಮುಖರಾಗಿದ್ದಾರೆ.
ಇಂದು ಚಿಮನಳ್ಳಿ ಹಾಗೂ ತಟಗಾರ ಕ್ರಾಸ್ ಬಳಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 26 ಕ್ಕೆ ಇಳಿದಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.