ಕುಮಟಾ: ಕೆ ಎಸ್ ಆರ್ ಟಿ ಸಿ ಯಲ್ಲಿ ಸುಧೀರ್ಘ ವರ್ಷಗಳ ಚಾಲಕರಾಗಿ ಸೇವೆಸಲ್ಲಿಸಿ ಅಪಘಾತ ರಹಿತ ಚಾಲನೆಗಾಗಿ ಪ್ರಶಸ್ತಿ ಫಲಕಗಳನ್ನು ಪಡೆದು ಹೆಸರಾಗಿದ್ದ ಉಮೇಶ ಎಲ್ ಭಂಡಾರಿ ಜಡ್ಡಿಬರ್ಲ ಕಾಗಾಲ ಇವರು ದಿನಾಂಕ 21/10/2020 ರಂದು ರಾತ್ರಿ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ನಿಧನರಾದರು.

RELATED ARTICLES  ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ.

ಕೆಲದಿನಗಳ ಹಿಂದೆ ಅನಾರೋಗ್ಯಕ್ಕೊಳಗಾದ ಇವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿದ್ದು ವೈದ್ಯರ ತೀವ್ರಪ್ರಯತ್ನದ ಬಳಿಕವೂ ಉಳಿಸಿಕೊಳ್ಳಲಾಗಲ್ಲಿ.ಮೃತರು ಎರಡು ವರ್ಷಗಳ ಹಿಂದೆ ಸೇವಾ ನಿವೃತ್ತರಾದ ಬಳಿಕ ಹುಟ್ಟೂರು ಕಾಗಾಲದಲ್ಲಿ ನೆಲೆಸಿದ್ದರು.

RELATED ARTICLES  ಯಕ್ಷಲೋಕದ ಬಗೆಗೆ ಮಾಹಿತಿನೀಡುತ್ತಿರುವ ಯಕ್ಷರಂಗ ಪತ್ರಿಕೆಯ ಕಾರ್ಯ ಶ್ಲಾಘನೀಯ : ನಾಗರಾಜ ನಾಯಕ ತೊರ್ಕೆ.

ಯಕ್ಷಗಾನ ಪ್ರೇಮಿಯಾದ ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಬಂಧು ವರ್ಗದವರು ಮಿತ್ರರು ಅಪಾರ ಶೋಕವನ್ನು ವ್ಯಕ್ತಪಡಿಸಿದ್ದಾರೆ.