ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ಇದು ಸ್ವಲ್ಪ ಜನತೆಗೆ ಸಮಾಧಾನದ ಸಂಗತಿಯಾಗಿದೆ.
ಸಂತೇಗುಳಿಯ 90 ವರ್ಷದ ವೃದ್ಧ ಹಾಗೂ ಬಗ್ಗೋಣದ 43 ವರ್ಷದ ಪುರುಷ, ಮಾಸೂರಿನ 18 ವರ್ಷದ ಯುವತಿ, 40 ವರ್ಷದ ಮಹಿಳೆ, ಮೂರೂರಿನ 38 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.
ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,645 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 15 ಕೇಸ್
ತಾಲೂಕಿನಲ್ಲಿ ಇಂದು 15 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ನೀಲಗೇರಿಯ 80 ವರ್ಷದ ಪುರುಷ, 70 ವರ್ಷದ ಮಹಿಳೆ, ಹಳದೀಪುರ ಕುದಬೈಲ್‌ನ 54 ವರ್ಷದ ಪುರುಷ, ಪ್ರಭಾತನಗರದ 44 ವರ್ಷದ ಮಹಿಳೆ, ಕೇಳಗಿನಪಾಳ್ಯದ 28 ವರ್ಷದ ಯುವತಿ, ಪಟ್ಟಣದ 40 ವರ್ಷದ ಮಹಿಳೆ, ಗ್ರಾಮೀಣ ಭಾಗವಾದ ಮಾಡಗೇರಿಯ 67 ವರ್ಷದ ಮಹಿಳೆ, 24 ವರ್ಷದ ಯುವತಿ, 35 ವರ್ಷದ ಪುರುಷ, ಹಡಿನಬಾಳದ 24 ವರ್ಷದ ಯುವಕ, 59 ವರ್ಷದ ಪುರುಷ, ಬಂಗಾರಮಕ್ಕಿಯ 30 ವರ್ಷದ ಯುವಕ, ಮೂಡ್ಕಣಿಯ 45 ವರ್ಷದ ಪುರುಷ, 20 ವರ್ಷದ ಯುವಕ, ಮಂಕಿ ಹಳೆಮಠದ 40 ವರ್ಷದ ಮಹಿಳೆ ಸೇರಿದಂತೆ ಇಂದು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು 15 ಕೇಸ್ ದಾಖಲಾದ ಬೆನ್ನಲ್ಲೆ, ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1214 ಕ್ಕೆ ಏರಿಕೆಯಾಗಿದೆ.
ಯಲ್ಲಾಪುರದಲ್ಲಿಂದು ಇಬ್ಬರಿಗೆ ಕೊರೊನಾ ದೃಢ
ಯಲ್ಲಾಪುರ: ತಾಲೂಕಿನಲ್ಲಿ ಗುರುವಾರ ಇಬ್ಬರಿಗೆ ಕೊರೊನಾ ಧೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ.
ಇಂದು ಉದ್ಯಮನಗರದ ಒಬ್ಬರು ಹಾಗೂ ಕೋಟೆಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಈವರೆಗೆ ಗುಣಮುಖರಾದವರ ಸಂಖ್ಯೆ 712 ಕ್ಕೆ ಏರಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.