ಶಿರಸಿ: ಗಣೇಶನಗರದ ಮಂಜುನಾಥ ಕಾಲೋನಿಯ ಮನೆ ಕಳ್ಳತನ ಮಾಡಿದ ಆರೋಪಿತ ಅಬ್ದುಲ ರಜಾಕ ದೊಡ್ಡಮನಿ ರಾಜು ನಾಯ್ಡು ಅವರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳು ಹಾನಗಲ್, ಹಾವೇರಿ ಮೂಲದವರಾಗಿದ್ದು, ಇವರಿಂದ ಬಂಗಾರದ ಚೈನ್ 02, ಬಂಗಾರದ ಕಿವಿಯ ಹ್ಯಾಂಗಿಂಗ್ಸ್ ಸೇರಿ ಒಟ್ಟೂ 130,400ರೂ ಮೌಲ್ಯದ ಸ್ವತ್ತುಗಳನ್ನು ಪಡಿಸಿಕೊಂಡಿದ್ದಾರೆ.
ಶಿರಸಿ ವೃತ್ತ ನಿರೀಕ್ಷಕರಾದ ಪ್ರದೀಪ ಬಿ.ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ನಂಜಾನಾಯ್.ಎನ್ ಪಿ.ಎಸ್.ಐ, ಶ್ಯಾಮ್ ಪಾವಸ್ಕರ, ಪಿ.ಎಸ್.ಐ, ಸಂಪತಕುಮಾರ ಪಿ.ಎಸ್.ಐ ಅಂಕೋಲಾ ಠಾಣೆ, ನಾಗೇಂದ್ರ ನಾಯ್ಕ ಪ್ರೊಬೆಷನರಿ ಪಿ.ಎಸ.ಐ ಎನ್.ಎಮ್ ಠಾಣಿ ಶಿರಸಿ ಮತ್ತು ಸಿಬ್ಬಂದಿಗಳಾದ ಸಿ.ಹೆಚ.ಸಿ ಗಳಾದ ಪ್ರದೀಪ ರೇವಣಕರ್, ರಮೇಶ್ ಮುಚ್ಚಂಡಿ, ಚೇತನಕುಮಾರ ಎಚ್, ಸುರೇಶ ಕಟ್ಟಿ ಸಿ.ಪಿ.ಸಿ – ಗಣಪತಿ ನಾಯ್ಕ, ಸೇರಿದಂತೆ ಸಿ.ಹೆಚ.ಸಿ ಮಹ್ಮದ ಶಫಿ ಶೇಖ್ ಯಲ್ಲಾಪುರ ಪೊಲೀಸ ಠಾಣಿ ಮತ್ತು ಸಿ.ಪಿ.ಸಿ ಕೂಟೇಶ ಮತ್ತು ಗುರುರಾಜ ನಾಯ್ಕ ಹಾಗೂ ಸುಧಿರ ಮಡಿವಾಳ ತಾಂತ್ರಿಕ ವಿಭಾಗದವ ರವರನ್ನೊಳಗೊಂಡ ಅಪರಾಧ ಪತ್ತೆದಳ ರಚಿಸಿ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರ ಮಾಡಿದ್ದಾರೆ.
ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಲಯ ಆರೋಪಿತರಿಗೆ ನ್ಯಾಯಾಂಗ ಬಂಧನ ನೀಡಿದೆ.