ಬೆಂಗಳೂರು: ಖ್ಯಾತ ಗಾಯಕ ಎಲ್ ಎನ್ ಶಾಸ್ತ್ರಿ(46) ನಿಧನರಾದರು. ಹಲವು ದಿನಗಳಿಂದ ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ ಇಂದು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಗಾಯಕ ಎಲ್.ಎನ್ ಶಾಸ್ತ್ರಿ ಅವರು ನಾಡಿನ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಅಚ್ಚಳಿಯದ ಹೆಜ್ಜೆಗಳನ್ನು ಉಳಿಸಿ ಎಲ್ಲರ ಮನಸ್ಸನ್ನು ಗೆದ್ದು ಹಲವಾರು ಗಣ್ಯರಿಗೆ ಪ್ರೀತಿಪಾತ್ರ ರಾಗಿದ್ದರು.
ಸಿನಿಮಾ ರಂಗದ ಎಲ್ಲ ಹಿರಿಯ ಹಾಗೂ ನಟ, ನಟಿಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.