ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಬರುವ ಮಾರ್ಚ ತಿಂಗಳಲ್ಲಿ ನೆಡೆಯುವ ಸಾಧ್ಯತೆಗಳಿದ್ದು ಈ ಕುರಿತಾಗಿ ರಾಜ್ಯ ಅಧ್ಯಕ್ಷಸ್ಥಾನದ ಸ್ಪರ್ಧಿಗಳು ತುರುಸಿನ ಪ್ರಚಾರ ಕೈಗೊಳ್ಳುತ್ತಿರುವ ಬೆನ್ನಹಿಂದೇ ಉತ್ತರ ಕನ್ನಡ ಜಿಲ್ಲೆಯ ಕಸಾಪ ಅಧ್ಯಕ್ಷ ಸ್ಥಾನದ ಕುರಿತಾದ ಚರ್ಚೆಗಳು ಆರಂಭವಾಗಿದೆ.
ಈ ಬಾರಿ ಹಿಂದುಳಿದ ಪಂಗಡಕ್ಕೆ ಸೇರಿದ ಡಾ.ಶ್ರೀಧರ ಗೌಡ ಉಪ್ಪಿನ ಗಣಪತಿಯವರು ಸ್ಪರ್ಧಿಸ ಬೇಕೆಂಬುದು ಹಲವರ ಅಭಿಪ್ರಾಯ ವಾಗಿದೆ.ಜಿಲ್ಲೆಯ ಬಹುಸಂಖ್ಯಾತ ಹಾಲಕ್ಕಿ ಜನಾಂಗಕ್ಕೆ ಸೇರಿರುವ ಡಾ,ಶ್ರೀಧರ ಗೌಡ ಅವರು ಪ್ರತಿಭಾವಂತ ಶಿಕ್ಷಕರಾಗಿದ್ದಾರೆ.
ಹಾಗೂ ಡಾಕ್ಟರೇಟ್ ಪಡೆದು ಸಮಾಜದ ಗರಿಮೆ ಹೆಚ್ಚಿಸಿದ್ದಾರೆ.
ಕಡಲಿಗರ ಸಂಸ್ಕೃತಿ ಇವರ ಸಂಶೋಧನಾ ಪ್ರಬಂಧವಾಗಿದ್ದು ಈ ಕೃತಿಗೆ ವ್ಯಾಪಕ ಜನ ಮನ್ನಣೆಯೂ ದೊರಕಿದೆ.
ಪ್ರಸ್ತುತ ಕುಮಟಾ ತಾಲೂಕಿನ ಕಸಾಪ ಅಧ್ಯಕ್ಷರಾಗಿರುವ ಇವರು ತಮ್ಮ ಅವಧಿಯಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ಅದ್ಧೂರಿಯಾಗಿ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ.ಅಲ್ಲದೇ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನೂ ಸಂಘಟಿಸಿದ್ದಾರೆ.
ಕವಿ ಹೃದಯಿ ಅಜಾತ ಶತ್ರು ವ್ಯಕ್ತಿತ್ವದ ಇವರು ವ್ಯಾಪಕವಾದ ಸ್ನೇಹಿತರ ವಲಯವನ್ನು ಹೊಂದಿದ್ದು ಇವರು ಅಭ್ಯರ್ಥಿ ಆಗಬೇಕೆಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ.ಇವರ ಸ್ಪರ್ಧೆಯಿಂದ ಜಿಲ್ಲಾ ಕಸಾಪ ಚುನಾವಣೆ ರಂಗೇರಲಿದೆ ಎಂದು ಶಿಕ್ಷಕ ಹಾಗೂ ಸಾಹಿತ್ಯಿಕ ವಲಯದಲ್ಲಿ ವಿಶ್ಲೇಷಿಸಲಾಗಿದೆ.ಇದಕ್ಕೆ ಡಾ ಶ್ರೀಧರ ಗೌಡರವರು ಯಾರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ, ಅವರ ಮುಂದಿನ ನಡೆ ಹೇಗೆ ಎಂಬ ಬಗ್ಗೆ ಕಾಲವೇ ಉತ್ತರಿಸಲಿದೆ.