ಶಿರಸಿ: ಕಳೆದ ಕೆಲ ದಿನಗಳ ಹಿಂದೆ ಶಿರಸಿಯ ಆಸ್ಪತ್ರೆ ಹಾಗೂ ಡಾ.ಮಹೇಶ ಹೆಗಡೆ ಅವರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದ ಆದಿತ್ಯ ಹೆಗಡೆ ಎಂಬುವರ ಮೇಲೆ ಶಿರಸಿಯ ನ್ಯಾಯಾಲಯದಲ್ಲಿ ₹1 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದ ಬಳಸಿಕೊಂಡು ಆದಿತ್ಯ ಹೆಗಡೆ ವೈದ್ಯರ ಹಾಗೂ ಆಸ್ಪತ್ರೆಯ ವಿರುದ್ಧ ತಮ್ಮ ಅಭಿಪ್ರಾಯವನ್ನು ವಿಡಿಯೋ ಮಾಡಿ ಸಾರ್ವಜನಿಕವಾಗಿ ಹರಿಬಿಟ್ಟಿದ್ದರು. ಇದರಿಂದ ಆಸ್ಪತ್ರೆ ಹಾಗೂ ವಯಕ್ತಿಕವಾಗಿ ಸಾಕಷ್ಟು ಹಾನಿಯಾಗಿದ್ದು, ವಿಡಿಯೋ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಡಾ.ಮಹೇಶ ಹೆಗಡೆ ಶಿರಸಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.‌

RELATED ARTICLES  ಉತ್ತರಕನ್ನಡ ಜಿಲ್ಲೆಯು ಹೈನುಗಾರಿಕೆಗೆ ಹೇಳಿ ಮಾಡಿಸಿದ ಪ್ರದೇಶ : ಕಾಗೇರಿ

ಅಲ್ಲದೇ ಭಾರತೀಯ ದಂಡ ಸಂಹಿತೆ 500 ಹಾಗೂ 502 ರ ಅಡಿಯಲ್ಲಿ ಇದೊಂದು ಶಿಕ್ಷಾರ್ಹ ಪ್ರಕರಣ ಆದ ಕಾರಣ ಆದಿತ್ಯ ಹೆಗಡೆಗೆ ಸೂಕ್ತ ಕ್ರಮ ನೀಡಬೇಕು ಎಂದು ಆಗ್ರಹಿಸಿ ಮಹೇಶ ಹೆಗಡೆ ಶಿರಸಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನರನ್ನು ಈ ವಿಡಿಯೋ ತಲುಪಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

RELATED ARTICLES  ಶಾಸಕ ದಿನಕರ ಶೆಟ್ಟಿಯವರಿಗೂ ಕೊರೋನಾ ಪಾಸಿಟೀವ್..

Source: EUttarakannada