ಶಿರಸಿ:ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂದಿಸಿದ ಘಟನೆ ಶಿರಸಿ-ಯಲ್ಲಾಪುರ ಚಕ್ ಪೋಸ್ಟ ಬಳಿ  ನಡೆದಿದೆ.

ಬಸವರಾಜ ಗುತ್ಯಪ್ಪ ಕೊಪ್ಪದ (23)ಹಾನಗಲ್, ಹನುಮಂತ ಸುರೇಶಪ್ಪ ಗಡ್ಡದ (23) ಹಾನಗಲ್, ಅಲ್ಲಾಭಕ್ಷ ಲಾಲಸಾಬ್ ನದಾಫ್ ಹಾನಗಲ್ ಬಂದಿತ ಆರೋಪಿಗಳಾಗಿದ್ದಾರೆ.

RELATED ARTICLES  ಪ್ರತಿಭಟನೆಯ ವೇಳೆ ಕುಸಿದ ಮಹಿಳೆ: ಹಾರಿ ಹೋಯ್ತು ಪ್ರಾಣ ಪಕ್ಷಿ..!

ಮಾರುತಿ ಸುಜುಕಿ ಕಂಪನಿಯ ಸುಪರ್ ಕ್ಯಾರಿ ಟರ್ಬೊ ಮಾದರಿ ವಾಹನ ದಲ್ಲಿ ಹಿಂಸಾತ್ಮಕವಾಗಿ ಜಾನುವಾರಗಳನ್ನು ಸಾಗಾಟ ಮಾಡುವ ಸಂಧರ್ಭದಲ್ಲಿ ಯಲ್ಲಾಪುರ ನಾಕಾ ಕ್ರಾಸ್ ಹತ್ತಿರ ಸಿ.ಪಿ.ಐ ಶಿರಸಿರವರ ಮಾರ್ಗದರ್ಶನದಲ್ಲಿ ಶ್ರೀಮತಿ ಜಯಶ್ರೀ ಶಾನಭಾಗ , ಪಿ.ಎಸ್.ಐ , ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆ , ಶ್ರೀ ನಾಗೇಂದ್ರ ನಾಯ್ಕ , ಪ್ರೋಬೆಷನರಿ ಪಿ.ಎಸ್.ಐ , ಶ್ರೀಮತಿ ಗೀತಾ ಕಲಘಟಗಿ , ಎ.ಎಸ್.ಐ , ಚಿದಾನಂದ ನಾಯ್ಕ ರವರು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಸಿ.ಎಂ ಕಾರ್ಯಕ್ರಮಗಳು.