ಕುಮಟಾ: ಪಟ್ಟಣದ ಬಸ್ತಿಪೇಟೆಯ ತುರ್ಮೆ ಬಿಲ್ಡಿಂಗ್‌ನಲ್ಲಿ ನೂತನವಾಗಿ ಶುಭಾರಂಭಗೊಂಡ ಸಂಬಂಧ ಕ್ರೆಡಿಟ್ ಸೌಹಾರ್ದ ಸಹಕಾರಿಯನ್ನು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಸಹಕಾರಿ ಸಂಘಗಳು ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸಬೇಕು. ನೂತನವಾಗಿ ಆರಂಭವಾದ ಸಂಬಂಧ ಕ್ರೆಡಿಟ್ ಸೌಹಾರ್ದ ಸಹಕಾರಿಯು ಮುಂದಿನ ದಿನಗಳಲ್ಲಿ ಕುಮಟಾದ ಜನತೆಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

RELATED ARTICLES  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣಗಳ ರಕ್ಷಣೆ : ಬೆಂಗಾವಲಿಗೆ ಬಂದ ಇನ್ನೋವಾ ಕಾರ್ ಪೊಲೀಸ್ ವಶಕ್ಕೆ.

ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ, ಪ್ರದೀಪ ನಾಯಕ ದೇವರಬಾವಿ, ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಜೆ.ಎಡಿ.ಎಸ್.ಮುಖಂಡ ಸೂರಜ ನಾಯ್ಕ ಸೋನಿ, ಗುತ್ತಿಗೆದಾರ ರಾಮನಾಥ ಶಾನಭಾಗ, ಪ್ರಮುಖರಾದ ರವಿಕುಮಾರ ಶೆಟ್ಟಿ, ಎಂ.ಎ.ಹೆಗಡೆ ಕಡ್ಲೆ, ಪುರಸಭಾ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಸೇರಿದಂತೆ ಮತ್ತಿತರರು ಬ್ಯಾಂಕ್‌ಗೆ ಆಗಮಿಸಿ ಶುಭಕೋರಿದರು.

RELATED ARTICLES  ಗೋಸ್ವರ್ಗದಲ್ಲಿ ಲೋಕಾರ್ಪಣೆಗೊಂಡ 'ಕುಮಾರವ್ಯಾಸಭಾರತ ಕಥಾಮೃತ' ಕೃತಿ - ಓದುಗ ವೃಂದಕ್ಕೆ ಶ್ರೀಭಾರತೀ ಪ್ರಕಾಶನದ ಕೊಡುಗೆ

ಈ ಸಂಧರ್ಭದಲ್ಲಿ ಸಂಬಂಧ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ಪಟಗಾರ, ಉಪಾಧ್ಯಕ್ಷ ವಿನಾಯಕ ಪಟಗಾರ, ನಿರ್ದೇಶಕರಾದ ದತ್ತಾತ್ರೇಯ ಪಟಗಾರ, ಗಣಪತಿ ಪಟಗಾರ, ಮಂಜುನಾಥ ಪಟಗಾರ, ಪಾಂಡುರಂಗ ಪಟಗಾರ, ಯೋಗೇಶ ಪಟಗಾರ, ನವೀನ ಪಟಗಾರ, ರಾಜಶೇಖರ ಪಟಗಾರ, ಭಾಸ್ಕರ ಪಟಗಾರ, ಗಣಪು ಮುಕ್ರಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.