ಸಾಲೀಕೇರಿ,ಹಳದೀಪುರ:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾ ‌ಹಾಗೂ ‌ಸ್ನೇಹ ಕುಂಜ ಟ್ರಸ್ಟ ಹೋನ್ನಾವರವರ ‌ಸಂಯುಕ್ತ ಆಶ್ರಯದಲ್ಲಿ ಕರೋನಾ ವೈರಸ್ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಕುರಿತಾಗಿ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾದ ವೈದ್ಯಾಧೀಕಾರಿಯಾದ ಡಾ. ಸನ್ಮತಿ ಹೆಗಡೆಯವರು ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ವಿಧಾನಗಳ ಕುರಿತು ವಿವರಣೆಯನ್ನು ನೀಡಿ ಓರಲ್ ಪಿಲ್ಸ ಸಮುದಾಯದ ಮಹಿಳೆಯರಿಗೆ ವಿತರಣೆ ಮಾಡಿದರು.
.ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಕಾರ್ಯಕ್ರಮಾಧೀಕಾರಿ ಮಿಸ್. ಮಂಜುಳಾ ಗೌಡರವರು ಕರೋನಾ ವೈರಸ್ ಹರಡುವ ಮತ್ತು ಹರಡದಂತೆ ತಡೆಗಟ್ಟವ ಕ್ರಮದ ಕುರಿತಾಗಿ ಮಾಹಿತಿ ನೀಡಿದರು.

RELATED ARTICLES  ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಈ ಕಾರ್ಯಕ್ರಮದಲ್ಲಿ ಸ್ನೇಹ ಕುಂಜ ಟ್ರಸ್ಟನ ಚಂದ್ರಕಲಾ ಹಾಗೂ ಆಶಾ ಕಾರ್ಯಕತ್ರೆಯಾದ ಪ್ರಭಾಮಣಿಯವರು
ಉಪಸ್ಥಿತರಿದ್ದರು.