ನೀರ್ಚಾಲು :- ಪ್ರಸಿದ್ದ ಕಿಳಿಂಗಾರು ವೈದಿಕ ಮನೆತನದ ಕೊಡುಗೈ ದಾನಿ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುತ್ರ ಕೆ.ಯನ್ ಕೃಷ್ಣ ಭಟ್ ಅವರನ್ನು ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ ಗೌರವಿಸಲಾಯಿತು.

ಹಲವು ವರ್ಷಗಳಿಂದ ಪಂಚಾಯತ್ ಸದಸ್ಯರಾಗಿದ್ದು ಕಳೆದ 5 ವರ್ಷಗಳ ಕಾಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಎಲ್ಲರನ್ನೂ ಸಮಾನ ಭಾವದಿಂದ ಕಾಣುವ ಹವ್ಯಕ ಸಮಾಜದ ಮುಂಚೂಣಿ ನಾಯಕರೆಂದು ತಿಳಿಸಿದ ಮುಳ್ಳೇರಿಯಾ ಹವ್ಯಕ ಮಂಡಲದ ಉಪಾಧ್ಯಕ್ಷರಾದ ಬೇ.ಸೀ ಗೋಪಾಲಕೃಷ್ಣ ಭಟ್ಟರು ಕೆ.ಯನ್. ಕೃಷ್ಣ ಭಟ್ಟರನ್ನು ಗೌರವಿಸಿದರು.

RELATED ARTICLES  ನೋಟು ಅಮಾನ್ಯಕಾರಣದಿಂದ ದೇಶ ಹಲವಾರು ದಶಕಗಳಷ್ಟು ಹಿಂದೆ ಹೋಗಿದೆ:ಶಿವರಾಮ ಹೆಬ್ಬಾರ

ಕೋವಿಡ್ ಮಾನದಂಡಗಳನ್ನನುಸರಿಸಿ ಕಾರ್ಯಕ್ರಮವನ್ನು ಜರಗಿಸಲಾಯಿತು.

ಮುಳ್ಳೇರಿಯಾ ಮಂಡಲದ ಪೆರಡಾಲ ವಲಯದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಸ್ವಾಗತಿಸಿದರು. ನೀರ್ಚಾಲು ವಲಯ ಉಪಾಧ್ಯಕ್ಷ ಶಂಕರನಾರಾಯಣ ಶರ್ಮ ನಿಡುಗಳ ಪ್ರಾಸ್ತಾವಿಕವಾಗಿ ನುಡಿಯುತ್ತಾ ಪ್ರಸಿದ್ದ ಪುರೋಹಿತ ಮನೆಗಳಲ್ಲೊಂದಾದ ಕಿಳಿಂಗಾರು ಮನೆತನದಲ್ಲಿ ಜನಿಸಿದ ಕೃಷ್ಣ ಭಟ್ಟರು ಪುರಕ್ಕೆ ಹಿತವನ್ನೇ ಬಯಸುತ್ತಿರುವ ಧೀಮಂತ ವ್ಯಕ್ತಿಯೆಂದು ನುಡಿದರು.

RELATED ARTICLES  ಕೊರೋನಾ ಹಿನ್ನೆಲೆ : ನವರಾತ್ರಿಯಲ್ಲಿ ಕರಿಕಾನಮ್ಮನ ದರ್ಶನ ಮಾತ್ರ

ನೀರ್ಚಾಲು ವಲಯಾಧ್ಯಕ್ಷ ಜಯದೇವ ಖಂಡಿಗೆ, ಪಳ್ಳತ್ತಡ್ಕ ವಲಯಾಧ್ಯಕ್ಷ ಪರಮೇಶ್ವರ ಪೆರುಮುಂಡ ಶುಭಾಶಂಸನೆಗೈದರು.
ಮುಳ್ಳೇರಿಯಾ ಮಂಡಲ ಉಪಾಧ್ಯಕ್ಷ ಬೇ.ಸಿ ಗೋಪಾಲಕೃಷ್ಣ ಭಟ್, ಸಾಯಿರಾಂ ಗೋಪಾಲಕೃಷ್ಣ ಭಟ್ ದಂಪತಿಗಳು, ಕೆ.ಯನ್ ಕೃಷ್ಣ ಭಟ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಳ್ಳೇರಿಯಾ ಮಂಡಲದ ಸಹಾಯ ವಿಭಾಗದ ಸರಳಿ ಮಹೇಶ ಕಾರ್ಯಕ್ರಮ ನಿರೂಪಿಸಿದರು. ಪಳ್ಳತ್ತಡ್ಕ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಧನ್ಯವಾದವಿತ್ತರು. ಪೆರಡಾಲ, ಪಳ್ಳತ್ತಡ್ಕ, ನೀರ್ಚಾಲು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.