ಕುಮಟಾ : ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗುವ ಮೂಲಕ ಹೊಸ ದಾಖಲೆ ಬರೆದ ರವೀಂದ್ರ ಭಟ್ಟ ಸೂರಿಯವರನ್ನು ಅವರ ಹುಟ್ಟೂರು ಕರ್ಕಿಯಲ್ಲಿ ಇಂದು ಸನ್ಮಾನಿಸಲಾಯಿತು.

ಹೊನ್ನಾವರ ತಾಲ್ಲೂಕು ಕರ್ಕಿಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಹವ್ಯಕ ಗ್ರಾಮ ಸಂಸ್ಥೆ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಶ್ರೀ ಜಿ.ಎಸ್ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು.

RELATED ARTICLES  ಕುಮಟಾದಲ್ಲಿ ಸಿಡಿಲುಬಡಿದು ಯುವತಿ ಬಲಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಂದ್ರ ಭಟ್ಟ ಸೂರಿ ” ಹುಟ್ಟೂರಿನಲ್ಲಿ ನಡೆದ ಈ ಸನ್ಮಾನ ನನ್ನ ಬದುಕಿನ ಮರೆಯಲಾರದ ಕ್ಷಣ. ಇದರ ಹಿಂದೆ ನಿಮ್ಮೆಲ್ಲರ ಪ್ರೀತಿ ಅಭಿಮಾನ ಇದೆ. ಕುಲದೇವರ ಸನ್ನಿಧಿಯಲ್ಲಿ ಕುಲ ಬಾಂಧವರು ನೀಡಿದ ಗೌರವವನ್ನು ನಿಮ್ಮೆಲ್ಲರ ಆಶೀರ್ವಾದ ಎಂತಾ ಸ್ವೀಕರಿಸಿದ್ದೇನೆ. ಇದರಿಂದ ನನ್ನ ಜವಾಬ್ಧಾರಿ ಹೆಚ್ಚಿದೆ. ನನ್ನ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಗುರಿ ಇದೆ. ನಿಮ್ಮೆಲ್ಲರ ಹಾರೈಕೆಯಿಂದ ಖಂಡಿತಾ ಅದು ಪೂರೈಸುತ್ದದೆ ಎಂಬ ನಂಬಿಕೆ ಇದೆ ಎಂದರು.

RELATED ARTICLES  ದೇಶೀಯ ಕ್ರೀಡೆ, ಕಲೆಗಳಿಗೆ ಪ್ರೋತ್ಸಾಹ ನೀಡಿದ ಹರಿಕಾಂತ ಸಮಾಜದ ಕಾರ್ಯ ಶ್ಲಾಘನೀಯ : ನಾಗರಾಜ ನಾಯಕ ತೊರ್ಕೆ

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಊರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.