ಕುಮಟಾ: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ 14 ವರ್ಷ ಮೇಲ್ಪಟ್ಟ ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ `ಬದಲಾಗುತ್ತಿದೆ ರಾಷ್ಟ್ರೀಯ ಶಿಕ್ಷಣ ನೀತಿ- ಬದಲಾಗುವುದೇ ಭಾರತ?’ (ನ್ಯೂ ಎಜುಕೇಶನ್ ಪಾಲಿಸಿ- ಎ ಗೇಮ್ ಚೇಂಜರ್) ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

RELATED ARTICLES  ಫೆ ೩ರಂದು ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಜೆ ಕಾರ್ಯಕ್ರಮ.

1,500 ಶಬ್ದಗಳನ್ನು ಮೀರದಂತೆ ಪ್ರಬಂಧ ಕೈ ಬರಹದಲ್ಲಿರಬೇಕು. ಮೊದಲ ಮೂರು ಅತ್ಯುತ್ತಮ ಪ್ರಬಂಧಗಳಿಗೆ 5,000 ರೂ, 3,000 ಮತ್ತು 2,000 ರೂ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧಿಗಳು ಪ್ರಬಂಧದ ಜೊತೆಯಲ್ಲಿ ಹೆಸರು, ವಿಳಾಸ, ಮೊಬೈಲ್, ದೂರವಾಣಿ ಸಂಖ್ಯೆ ನೀಡಬೇಕು. ಆಸಕ್ತರು ನ. 15 ರೊಳಗೆ ವಿನಯಾ ಶ್ರೀಧರ ಹೆಗಡೆ, ಅಧ್ಯಕ್ಷರು, ಲಯನ್ಸ್ ಕ್ಲಬ್ ಕುಮಟಾ, ಪೋ. ಹೊಲನಗದ್ದೆ, ತಾ. ಕುಮಟಾ, ಉತ್ತರ ಕನ್ನಡ ಜಿಲ್ಲೆ, ಮೊಬೈಲ್ ದೂರವಾಣಿ ಸಂಖ್ಯೆ: 9449148072 ವಿಳಾಸಕ್ಕೆ ಪ್ರಬಂಧ ಕಳಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಫೊನ್ ನಂಬರ್ ಇಲ್ಲದೆಯೂ ಇನ್ನು ಮಾಡಬಹುದು ಆಡಿಯೋ, ವಿಡಿಯೋ ಕಾಲ್..! ವಾಟ್ಸಪ್ ಗೆ ಸೆಡ್ಡು ಹೊಡೆಯಲು ಬರ್ತಿದೆ ಹೊಸ ಆಪ್ : ಏನದು ಗೊತ್ತಾ?