ಕುಮಟಾ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕೆಪಿಸಿಸಿ ಪದವೀಧರ ವಿಭಾಗದ ಅಧ್ಯಕ್ಷರಾದ ಆರ್.ಎಂ. ಕುಬೇರಪ್ಪ ಅವರ ಪರವಾಗಿ ಕುಮಟಾದ ಡಾ.ಎ.ವಿ.ಬಾಳಿಗಾ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಕಮಲಾ ಬಾಳಿಗಾ ಬಿ.ಎಡ್ ಕಾಲೇಜು, ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು, ಡಾ.ಎ.ವಿ.ಬಾಳಿಗಾ ಕಾಮರ್ಸ್ ಕಾಲೇಜು, ಮುಂತಾದಕಡೆ ಪ್ರಚಾರ ನಡೆಸಲಾಯಿತು.

RELATED ARTICLES  ಪರೇಶ್ ಮೇಸ್ತಾ ಸಾವು ಸಿಬಿಐ ಮೂಲಕ ಮರು ತನಿಖೆ ಮಾಡಿಸಲು ರಾಜ್ಯ ಕ್ರಮ ಕೈಗೊಳ್ಳಬೇಕು : ಕಾಗೇರಿ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿಗಳಾದ ರವಿಕುಮಾರ್ ಎಂ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಹೊನ್ನಪ್ಪ ನಾಯಕ ಹಾಗೂ ನಾಗೇಶ್ ನಾಯ್ಕ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರೇಖಾ ವಾರೇಕರ್, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷರಾದ ಮುಜಾಫರ್ ಸಾಬ್, ತಾಲೂಕು ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷರಾದ ಆನಂದು ನಾಯಕ್,ಪುರಸಭಾ ಸದಸ್ಯರಾದ ಎಂ.ಟಿ.ನಾಯ್ಕ, ಜಿಲ್ಲಾ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರಾದ ಸಂತೋಷ ನಾಯ್ಕ ಮುಂತಾದವರು ಹಾಜರಿದ್ದರು.

RELATED ARTICLES  ದೀಪಕ ಗಾಂವಕರ ಸಾಧನೆ.