ಭಟ್ಕಳ : ತಾಲೂಕಿನ ಮೀನುಗಾರರ ಬೇಡಿಕೆಯಂತೆ ಸರ್ಕಾರದ ಮುಜರಾಯಿ ಇಲಾಖೆ ಮತ್ತು ಬಂದರು ಒಳನಾಡು ಜಲ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕ ಸುನೀಲ್ ನಾಯ್ಕ ತಾಲೂಕಿನ ಅಳ್ವೆಕೋಡಿ, ತೆಂಗಿನಗುಂಡಿ ಹಾಗೂ ಭಟ್ಕಳ ಬಂದರುಗಳಿಗೆ ಬೇಟಿ ನೀಡಿ ಬಂದರು ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.

RELATED ARTICLES  ಶಾಲೆಯಲ್ಲಿ ಕೊರತೆಯಿದ್ದರೆ ಊರು ಅಭಿವೃದ್ಧಿಯಾಗಿಲ್ಲ ಎಂದೇ ಅರ್ಥ : ಶಾಸಕ ವೈದ್ಯ.

86 ಕೋಟಿ ರೂಪಾಯಿ ವೆಚ್ಚದಲ್ಲಿ ಅಳ್ವೆಕೋಡಿ ಬಂದರ್ ನ ಬ್ರೇಕ್ ವಾಟರ್ ಕಾಮಗಾರಿಯು ತೀರಾ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮಾನ್ಯ ಸಚಿವರಿಗೆ ಮನವರಿಕೆ ಮಾಡಲಾಯಿತು, ತಕ್ಷಣ ಸ್ಪಂದಿಸಿದ ಸಚಿವರು ಸಂಭಂದಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಗೆ ಚುರುಕು ಮುಟ್ಟಿಸುವಂತೆ ತಾಕೀತು ಮಾಡಿದರು.

RELATED ARTICLES  ಕಾರವಾರದ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಇನ್ನುಳಿದಂತೆ ತೆಂಗಿನಗುಂಡಿ ಬಂದರ್ ನ ವಿಸ್ತರಣೆ ಹಾಗೂ ಭಟ್ಕಳ ಬಂದರ್ ನ ಡ್ರೆಜಿಂಗ್ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ನೆರವೇರಿಸಿಕೊಡುವಂತೆ ಹಾಗೂ ಮೀನುಗಾರರು ಅನಭವಿಸುತ್ತಿರುವ ತೊಂದರೆಗಳನ್ನು ಸನ್ಮಾನ್ಯ ಸಚಿವರಿಗೆ ಮನವರಿಕೆ ಮಾಡಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ಭರವಸೆಯನ್ನು ನೀಡಿದರು.