ಕುಮಟಾ ತಾಲೂಕಿನಲ್ಲಿ ಇಂದು 7 ಪ್ರಕರಣ ದಾಖಲಾಗಿದೆ. ಬಗ್ಗೋಣದ 31 ವರ್ಷದ ಮಹಿಳೆ, 70 ವರ್ಷದ ವೃದ್ದ, 65 ವರ್ಷದ ವೃದ್ದೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಿರೇಗುತ್ತಿನ 46 ವರ್ಷದ ಮಹಿಳೆ, ಮೊರಬಾದ 39 ವರ್ಷದ ಪುರುಷ, ಮೂಲೇಕೇರಿಯ 35 ವರ್ಷದ ಪುರುಷ, 46 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಹಳದೀಪುರದ 40 ವರ್ಷದ ಮಹಿಳೆ, 29 ವರ್ಷದ ಯುವಕ, ಮುಗ್ವಾ ಸುರಕಟ್ಟೆಯ 70 ವರ್ಷದ ಮಹಿಳೆ, 15 ವರ್ಷದ ಬಾಲಕ, ಮೋಳ್ಕೋಡಿನ 40 ವರ್ಷದ ಪುರುಷ, ಜನಕ್ಕಡಕಲನ 30 ವರ್ಷದ ಯುವಕ, ಮಂಕಿ ಎಳ್ಳಿಮಕ್ಕಿಯ 21 ವರ್ಷದ ಯುವಕ, ಹೊನ್ನಾವರ ಪಟ್ಟಣದ ಪ್ರಭಾತನಗರದ 67 ವರ್ಷದ ಪುರುಷ, ರಾಮತೀರ್ಥ ಕ್ರಾಸಿನ 53 ವರ್ಷದ ಪುರುಷ, 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

RELATED ARTICLES  ಮೂಡಂಗಿ ರಂಗಮಂದಿರದಲ್ಲಿ "ಪ್ರಜಾರಾಜ್ಯೋತ್ಸವ ಕಾರ್ಯಕ್ರಮ"

 

ಶಿರಸಿ ನಗರದಲ್ಲಿ 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮೂವರು ಗುಣಮುಖರಾಗಿದ್ದಾರೆ.
ಇಂದು ಅಯ್ಯಪ್ಪ ನಗರದಲ್ಲಿ 3, ಬನವಾಸಿ ರೋಡಿನಲ್ಲಿ 1, ರಾಜೀವ ನಗರದಲ್ಲಿ 4, ಬನವಾಸಿಯಲ್ಲಿ 1, ಕೆರೆಕೊಪ್ಪದಲ್ಲಿ 1, ಪಡ್ತಿಗಲ್ಲಿ 1, ಹುಣಸೆಕೊಪ್ಪದಲ್ಲಿ 2, ಗುರುನಗರದಲ್ಲಿ 1, ವಿದ್ಯಾನಗರದ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

RELATED ARTICLES  ಅಡುಗೆ ವೇಳೆ ಈ ಟ್ರಿಕ್ ಉಪಯೋಗಿಸಿದರೆ ಉಳಿತಾಯ ಗ್ಯಾರಂಟಿ

ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ 7 ಜನರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 51 ಕ್ಕೇರಿದೆ. ಇಂದು ಪಟ್ಟಣದ ನೂತನನಗರದಲ್ಲಿ 3, ಕೊಂಡೆಮನೆಯಲ್ಲಿ 2, ಕಿರವತ್ತಿ ಹಾಗೂ ಕಂಡ್ರನಕೊಪ್ಪಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.