ಕುಮಟಾ : ಕರ್ನಾಟಕ ಸರಕಾರ ಮತ್ತು ಪೋರ್ಟಿಯಾ ಆಸ್ಪತ್ರೆಯು ಜಂಟಿಯಾಗಿ ಕೋವಿಡ್ ಹೋಮ್ ಆಯ್ಸುಲೇಷನ್ ಇರುವವರನ್ನು ಉತ್ತಮವಾಗಿ ಉಪಚರಿಸಿದೆ ಎಂದು ಸರಕಾರದ ಸ್ಪಂದನೆಗೆ ಕುಮಟಾದ ವ್ಯಾಪಾರಸ್ಥ ಸಂಘದ ಪ್ರಮುಖರು ಉದ್ಯಮಿಗಳೂ ಆದ ಶೇಷಗಿರಿ ಶಾನಭಾಗ ವಲ್ಲಿಗದ್ದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನ ಭಾರತವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮೋದೀಜಿಯವರ ಸಮರ್ಥ ಆಡಳಿತದಲ್ಲಿ ದೇಶವು ಆರ್ಥಿಕವಾಗಿ ಸಬಲ ಆಗುತ್ರಿರುವ ವೇಳೆಯಲ್ಲಿಯೇ ಕೊರೊನಾ ದೇಶದ ಪ್ರಗತಿಗೆ ಬಲವಾದ ಹೊಡೆತವನ್ನೇ ನೀಡಿತು.ಜೀವ ಮೊದಲು ಆ ಬಳಿಕ ಜೀವನ ಎಂದು ಲಾಕ್ ಡೌನ್ ಮಾಡಿದ ಪ್ರಧಾನಿ ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡರು.ಸಾವಿರ ಸಾವಿರ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳು ಕಾಣಿಸಿಕೊಂಡವು. ಈ ವೇಳೆ ಸರಕಾರ ಸೋಂಕಿತರನ್ನು ಉಪಚರಿಸಲು ಕೈಮೀರಿ ಪ್ರಯತ್ನ ಮಾಡಿದರೂ ಅಲ್ಲಲ್ಲಿ ಕೆಲವು ಆರೋಪಗಳು ಕೇಳಿ ಬಂದವು ವೈದ್ಯರ ನಿರ್ಲಕ್ಷ್ಯ ವ್ಯವಸ್ಥೆಯ ಲೋಪ ಎಂದೆಲ್ಲಾ ದೂರುಗಳು ಕೇಳಿಬಂದವು.

RELATED ARTICLES  ಹಳ್ಳಿಗಳನ್ನು ವೃದ್ಧಾಶ್ರಮ ಆಗಲು ಬಿಡಬೇಡಿ : ಸುಬ್ರಾಯ ವಾಳ್ಕೆ

ಆದರೆ ಸ್ವತಃ ತಾನು ಈ ತೊಂದರೆಗೆ ಒಳಗಾದೆ .ಮನೆಯಲ್ಲಿಯೇ ಚಿಕಿತ್ಸೆ ಪಡೆದೆ. ಸರಕಾರದ ವತಿಯಿಂದ ಉತ್ತಮ ಸ್ಪಂದನ ದೊರಕಿದೆ.ಅತೀ ಮುತುವರ್ಜಿಯಿಂದ ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ರಾತ್ರಿ ವೈದ್ಯರು ಕರೆಮಾಡಿ ಆರೋಗ್ಯ ವಿಚಾರಣೆ ಮಾಡಿದರು.ಔಷಧಗಳನ್ನು ತೆಗೆದು ಕೊಳ್ಳವ ಕುರಿತು ಮಾರ್ಗದರ್ಶನ ನೀಡಿದರು.ಹಾಗೂ ಆಹಾರ ಉಪಹಾರಗಳ ಕುರಿತು ವಿಚಾರಿಸಿದರು.ಊಟೋಪಚಾರದ ವೆಚ್ಚಕ್ಕೆ ಸಮಸ್ಯೆ ಇದ್ದರೆ ಅದನ್ನೂ ಒದಗಿಸುವುದಾಗಿ ಹೇಳಿದರು.ಕೇಂದ್ರ ಸರಕಾರದ ವತಿಯಿಂದಲೇ ಈ ವ್ಯವಸ್ಥೆಯನ್ನು ಮಾಡಿದ್ದಾರೆ.ಹಾಗೂ ನಿತ್ಯವೂ ನಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿರುತ್ತಾರೆ.ಕೊರೊನಾ ಬಂದಾಗ ಹತ್ತಿರದವರೂ ದೂರ ಹೋಗಲು ಪ್ರಯತ್ನ ಪಡುತ್ತಾರೆ.ಆದರೆ ಸರಕಾರದ ವತಿಯಿಂದ ಸೇವೆ ಸಲ್ಲಿಸುತ್ತಿರು ವೈದ್ಯರು ಪ್ರತಿನಿತ್ಯ ಅತೀ ಆತ್ಮೀಯವಾಗಿ ವ್ಯವಹರಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿರುತ್ತಾರೆ.ಯಾರು ಏನೇ ಆಕ್ಷೇಪಿಸಿದರು ಸರಕಾರ ಹಾಗೂ ಸಂಬಂಧಿಸಿದ ವ್ಯವಸ್ಥೆ ಉತ್ತಮವಾಗಿಯೇ ನೋಡಿಕೊಂಡಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

RELATED ARTICLES  ಕುಮಟಾ : ಮಿರ್ಜಾನ್ ಸಮೀಪ ಅಪಘಾತ : ಐವರಿಗೆ ಗಾಯ