ಭಟ್ಕಳ: ಮುರುಡೇಶ್ವರದ ಹೆರಾಡಿ ಬಳಿ ಶಿಕ್ಷಕರಾದ ಗಜಾನನ ಗಣಪತಿ ನಾಯ್ಕ ಇವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳನುಗ್ಗಿದ ಕಳ್ಳರು ಮನೆಯಲ್ಲಿ ಕಪಾಟಿನಲ್ಲಿದ್ದ ಸುಮಾರು ೮ ಲಕ್ಷ ೬೫ ಸಾವಿರ ರೂ. ಮೌಲ್ಯದ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ.

ಗಜಾನನ ನಾಯ್ಕ ತಮ್ಮ ಕುಟುಂಬದ ಜೊತೆಗೆ ಹೊನ್ನಾವರದ ಮೂಲ ಮನೆಗೆ ಹೋಗಿ ಮಾರನೇ ದಿನ ಸಂಜೆ ಮನೆಗೆ ವಾಪಾಸ್ಸು ಬಂದಾಗ ಕಳ್ಳತನವಾದ ವಿಷಯ ತಿಳಿದಿದೆ.

RELATED ARTICLES  ಜೈ ಭೀಮ್ ಕಮಲ ಯಾತ್ರೆಗೆ ಶುಭಾರಂಭ:ಹೊಸ ಪ್ರಯತ್ನಕ್ಕೆ ಕೈಹಾಕಿದ ಕಾರವಾರದ ಕಮಲ ಪಾಳಯ!

ಕಳ್ಳರು ಮನೆಯ ಹೊರಗಿನ ಬಾಗಿಲು ಮುರಿದು ಮನೆಯ ಒಳ ನುಗ್ಗಿ ಬೆಡ್ ರೂಮಿನ ಬೀಗವನ್ನು ಮುರಿದು ಕಪಾಟಿನ ಬಾಗಿಲು ಹಾಗೂ ಲಾಕರ್ ಒಡೆದು ಅದರಲ್ಲಿದ್ದ ೧೭೩ ಗ್ರಾಂ ತೂಕದ ಕರಿಮಣಿ ಸರ, ೩ ಚೈನ್, ೩ ಕಿವಿಯೋಲೆ, ೧೫ ಉಂಗುರ ಸೇರಿದಂತೆ ವಿವಿಧ ಮಾದರಿಯ ಚಿನ್ನದ ಆಭರಣ ಹಾಗೂ ೩೫ ಸಾವಿರ ರೂ ನಗದು ಹಣವನ್ನು ಕದ್ದು ಪರಾರಿಯಾಗಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES  ಸ್ಪರ್ಧೆಗೆ ಹೆಸರು ನೊಂದಾಯಿಸಲು ಇಂದು ಕೊನೆಯ ದಿನ