ಕುಮಟಾ : ತಾಲೂಕಿನಲ್ಲಿ ಇಂದು 4 ಜನರಿಗೆ ಕರೋನಾ ಕೇಸ್ ದೃಢಪಟ್ಟಿದೆ. ಕುಮಟಾದ 43 ವರ್ಷದ ಮಹಿಳೆ, ಹಿರೇಗುತ್ತಿಯ 28 ವರ್ಷದ ಪುರುಷ, ಹಳಕಾರದ 24 ವರ್ಷದ ಪುರುಷ, ನಾಡುಮಾಸ್ಕೇರಿಯ 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಹೊನ್ನಾವರದಲ್ಲಿ ಎರಡು ಪಾಸಿಟಿವ್

ಹೊನ್ನಾವರ: ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಕಡತೋಕಾದ 73 ವರ್ಷದ ಮಹಿಳೆ, 52 ವರ್ಷದ ಮಹಿಳೆ ಸೇರಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

RELATED ARTICLES  ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಶೇಖರಯ್ಯ ಸ್ವಾಮಿಗಳು.

ಶಿರಸಿಯಲ್ಲಿಂದು 5 ಮಂದಿಗೆ ಕೊರೊನಾ ದೃಢ

ಶಿರಸಿ: ನಗರದಲ್ಲಿಂದು ಐವರಿಗೆ ಕೊರೊನಾ ದೃಢಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದಾರೆ. ಮಾರುತಿಗಲ್ಲಿಯಲ್ಲಿ 1, ದೊಡ್ನಳ್ಳಿಯಲ್ಲಿ 2, ಚಿಪಗಿಯಲ್ಲಿ 1, ಎಪಿಎಮ್‍ಸಿ ಮಾರ್ಕೇಟ್ ಹತ್ತಿರದಲ್ಲಿ 1 ಕೇಸ್ ದೃಢವಾಗಿದೆ.

ಯಲ್ಲಾಪುರದಲ್ಲಿಂದು 10 ಮಂದಿಗೆ ಕೊರೊನಾ ದೃಢ

ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ 10 ಜನರಿಗೆ ಕೊರೊನಾ ಧೃಢಪಟ್ಟಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಇಂದು ಹಂಡ್ರಮನೆಯಲ್ಲಿ 5, ಚಂದಗುಳಿಯಲ್ಲಿ 2 ಹಾಗೂ ಕಾಳಮ್ಮನಗರ, ರವೀಂದ್ರನಗರ, ಉಪಳೇಶ್ವರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

RELATED ARTICLES  ಹೊನ್ನಾವರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ : ಹಾಗೂ ಮನವಿ ಸಲ್ಲಿಕೆ

ಅಂಕೋಲಾದಲ್ಲಿಂದು 1 ಕೊವಿಡ್ ಕೇಸ್

ಅಂಕೋಲಾ : ಸೋಮವಾರ ತಾಲೂಕಿನಲ್ಲಿ 1 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ಪುರಲಕ್ಕಿ ಬೇಣದ 51ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿದೆ.