ಹೊನ್ನಾವರ :ಮುಗ್ವಾ ತಾಲೂಕಾ ಪಂಚಾಯತ ಸದಸ್ಯರು, ಮುಗ್ವಾ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾಗಿದ್ದ ಕೊಂಡಕೆರೆ ಟಿ.ಎಸ್ ಹೆಗಡೆ ಆಕಸ್ಮಿಕ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಹೊನ್ನಾವರ ಪಿ ಎಲ್ ಡಿ ಬೇಂಕ್ ನಿರ್ದೇಶಕರು, ಮುಗ್ವಾ ಸುಬ್ರಮಣ್ಯ ದೇವಾಲಯದ ಟ್ರಸ್ಟಿಗಳು, ಮತ್ತು ಇತ್ತೀಚೆಗೆ ನಡೆದ ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಆಯ್ಕೆ ಆಗಿ ಮಂಗಳವಾರ ನಡೆದ ಆಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆ ಆದ ಕೆಲವೇ ಗಂಟೆಗಳಲ್ಲಿ ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ.

RELATED ARTICLES  ಪ್ರತಿಭೆ ಬೆಳಗಲು ಪ್ರೋತ್ಸಾಹ ಬೇಕು - ಸುನಂದಾ ಪೈ

ಇವರು ಸಾಮಾಜಿಕ ಕಾರ್ಯ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಇವರು ಅನೇಕ ವರ್ಷಗಳಿಂದ ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಆಯ್ಕೆ ಆಗಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಇವರು ಅಪಾರ ಬಂಧು ಮಿತ್ರರು ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

RELATED ARTICLES  ಅಪ್ಪಟ ಹಿಂದೂವಾದಿಗೆ ಮೋದಿ ಸಂಪುಟದಲ್ಲಿ ಸ್ಥಾನ :ಸಂತಸ ಹಂಚಿಕೊಂಡ ನಾಗರಾಜ ನಾಯಕ ತೊರ್ಕೆ.