ಕುಮಟಾ: ತೀವ್ರ ಕುತೂಹಲ ಕೆರಳಿಸಿದ್ದ ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ 11 ಕ್ಕೆ 11 ನಿರ್ದೇಶಕರ ಸ್ಥಾನಗಳೂ ಬಿಜೆಪಿ ಪಾಲಾಗಿದೆ.

ಐದು ವರ್ಷಗಳ ಅವಧಿಗೆ ನಡೆಯುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಸದಸ್ಯರಾಗಿ ಸಾಲಗಾರ ಸಾಮಾನ್ಯ ಮೀಸಲಾತಿಯಲ್ಲಿ ಬರಗದ್ದೆಯ ಗಣಪತಿ ಗೋಪಾಲಕೃಷ್ಣ ಹೆಗಡೆ, ಮಹಾಬಲೇಶ್ವರ ಗಜಾನನ ಭಟ್ಟ, ಯಲವಳ್ಳಿಯ ಸುಬ್ರಹ್ಮಣ್ಯ ಪ್ರಭಾಕರ ಹಂದೆ, ಅಂತ್ರವಳ್ಳಿಯ ರಾಜಾರಾಮ ಕೇಶವ ಹೆಬ್ಬಾರ, ನೀಲಕೊಡಿನ ಮಂಜುನಾಥ ರಾಮ ಹೆಗಡೆ ಹಾಗೂ ಸಾಲಗಾರ ಹಿಂದುಳಿದ ಅ ವರ್ಗದಿಂದ ಶಿಳ್ಳೆಯ ಬೀರಾ ಬೊಮ್ಮು ಗೌಡ, ಯಲವಳ್ಳಿಯ ಅನಂತ ಕೃಷ್ಣ ಮಡಿವಾಳ ಅವರು ಆಯ್ಕೆಯಾಗಿದ್ದಾರೆ.

RELATED ARTICLES  ನಾಳೆಯಿಂದ ಕೊಂಕಣದಲ್ಲಿ "ರಜತ ಸಂಭ್ರಮ" :ನಡೆಯುತ್ತಿದೆ ಸಕಲ ಸಿದ್ಧತೆ: ಪ್ರತಿ ದಿನದ ಕಾರ್ಯಕ್ರಮದ ವಿವರ ಇಲ್ಲಿದೆ

ನಾಗಮ್ಮ ಮಾಸ್ತಿ ಮುಕ್ರಿ, ಸೀತಾ ಸತೀಶ ಭಟ್ಟ, ಗೀತಾ ಶ್ರೀಪತಿ ಶಾಸ್ತ್ರಿ, ಗಣೇಶ ಚಿದಾನಂದ ಭಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಲವು ವರ್ಷಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಬರಗದ್ದೆ ಸೊಸೈಟಿಗೆ ಹೊಸ ಸದಸ್ಯರ ಸೇರ್ಪಡೆಯಿಂದ ಹೊಸ ಕಳೆ ಬಂದಿದೆ. ಇವರೆಲ್ಲರನ್ನೂ ಜಿ.ಪಂ ಸದಸ್ಯರಾದ ಗಜಾನನ ಪೈ ಹಾಗೂ ಇತರರು ಅಭಿನಂದಿಸಿದ್ದಾರೆ.

RELATED ARTICLES  ಕಂಟೇನರ್ ನಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ : ಮಂಕಿ ಸಮೀಪ ಪೋಲೀಸರ ದಾಳಿ

ಭ್ರಷ್ಟಾಚಾರ ಹಾಗೂ ಭ್ರಷ್ಟರನ್ನ ಬೆಂಬಲಿಸಿದವರಿಗೆ ಗೇಟ್ ಪಾಸ್ ನೀಡುವ ಮೂಲಕ ರೈತ ಮತದಾರರು ತಮ್ಮ ಪ್ರಾಭಲ್ಯ ತೋರಿದ್ದಾರ ಎಂಬ ಬಗ್ಗೆ ಅನೇಕರು ಹೆಮ್ಮೆಪಟ್ಟಿರುವ ಬಗ್ಗೆ ವರದಿಯಾಗಿದೆ.