ನವದೆಹಲಿ: ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರಾದ ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ಉಗ್ರರು ಎಂದು ಘೋಷಿಸಿದವರಲ್ಲಿ ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜೀದ್​ ಮಿರ್​ ಕೂಡ ಇದ್ದು, ಈತ 26/11ರ ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ಹಾಗೇ ಯುಸುಫ್​ ಮುಜಾಮ್ಮಿಲ್​ ಎಂಬುವನೂ ಕೂಡ ಮುಂಬೈ ದಾಳಿಯ ಆರೋಪಿ. ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಸಹಾಯಕ ಛೋಟಾ ಶಕೀಲ್​ ಕೂಡ ಉಗ್ರ ಪಟ್ಟಿಗೆ ಸೇರಿದ್ದಾನೆ.

RELATED ARTICLES  ಸಿಹೆಚ್‌ಆರ್‌ಡಿ ಪರೀಕ್ಷೆಯಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರದ ಭದ್ರತೆಯ ಬಗೆಗಿನ ಬದ್ಧತೆ ಮತ್ತು ಭಯೋತ್ಪಾದಕತೆಯೆಡೆಗಿನ ಶೂನ್ಯ ಸಹಿಷ್ಣುತೆ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಒಟ್ಟು 18 ಮಂದಿಯನ್ನು ಉಗ್ರರು ಎಂದು ಘೋಷಣೆ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

RELATED ARTICLES  ಕುವೆಂಪು ಕಾವ್ಯದಲ್ಲಿ ಅಮೃತತ್ವದ ಸಾರವಿದೆ -ಕವಿ ವೆಂಕಟೇಶ ಬೈಲೂರು

.