ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ದಿ. ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವ ನೆನಪಿನಲ್ಲಿ ಕೊಡಮಾಡುವ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ ಮೂರೂರು ವಿಷ್ಣು ಭಟ್ಟ ಅವರು ಭಾಜನರಾಗಿದ್ದಾರೆ.

ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ.ವಿ.ರಾವ್ ಅವರ ನೆನಪಿನಲ್ಲಿ ನೀಡುವ ಟಿ.ವಿ.ರಾವ್ ಪ್ರಶಸ್ತಿಗೆ ಹವ್ಯಾಸಿ ಹಿಮ್ಮೇಳ ವಾದಕ ಹಾಗೂ ಯಕ್ಷ ಕಲಾವಿದ ಅಜಿತ್‌ಕುಮಾರ್ ಅಂಬಲಪಾಡಿ ಆಯ್ಕೆಯಾಗಿದ್ದಾರೆ.

RELATED ARTICLES  ಕೆನರಾ ಎಕ್ಸಲೆನ್ಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು ಮಕ್ಕಳ ಪ್ರಾರಂಭೋತ್ಸವ

ಈ ಎರಡೂ ಪ್ರಶಸ್ತಿಗಳನ್ನು ಚಿಟ್ಟಾಣಿ ಅಭಿಮಾನಿ ಬಳಗ ಕಳೆದ ಏಳು ವರ್ಷಗಳಿಂದ ನೀಡುತ್ತಿದ್ದು, ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ನ.7ರಂದು ಸಂಜೆ 5:15ಕ್ಕೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ತಿಳಿಸಿದ್ದಾರೆ.

RELATED ARTICLES  ಬೈಕ್ ಮತ್ತು ಕಾರಿನ ನಡುವೆ ಢಿಕ್ಕಿ