ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 79 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ12822ಕ್ಕೆ ಏರಿಕೆಯಾಗಿದೆ. 816 ಸಕ್ರಿಯ ಪ್ರಕರಣಗಳಿವೆ.
ಕುಮಟಾದಲ್ಲಿ ಏಳು ಪಾಸಿಟಿವ್
ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 9 ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ.
ತದಡಿಯ 26 ವರ್ಷದ ಯುವಕ, ತಿಪ್ಪಸಗಿಯ 39 ವರ್ಷದ ಪುರುಷ, ಹೆಗಡೆಯ 29 ವರ್ಷದ ಯುವಕ, 2 ವರ್ಷದ ಮಗು, 30 ವರ್ಷದ ಮಹಿಳೆ, 36 ವರ್ಷದ ಮಹಿಳೆ, ರುದ್ರಪಾದದ 15 ವರ್ಷದ ಬಾಲಕಿ, 14 ವರ್ಷದ ಬಾಲಕ, 12 ವರ್ಷದ ಬಾಲಕಿಯಲ್ಲಿಬಸೋಂಕು ದೃಢಪಟ್ಟಿದೆ.
ಹೊನ್ನಾವರ ತಾಲೂಕಿನಲ್ಲಿ 19 ಕೇಸ್
ಹೊನ್ನಾವರ ತಾಲೂಕಿನಲ್ಲಿ 19 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಮoಕಿಯ 27 ವರ್ಷದ ಯುವಕ, ಕೋರೆ ಖರ್ವಾದ 43 ವರ್ಷದ ಪುರುಷ, ಚಿತ್ತಾರ ವಡಗೇರಿಯ 61 ವರ್ಷದ ಪುರುಷ ಹಾಗೂ 56 ವರ್ಷದ ಮಹಿಳೆ, ಅನಂತವಾಡಿಯ 48 ವರ್ಷದ ಪುರುಷ, ಮಂಕಿ ದೇವರಗದ್ದೆಯ 46 ವರ್ಷದ ಪುರುಷ, ಗೇರಸೊಪ್ಪ ಬಂಗಾರಮಕ್ಕಿಯ 36 ವರ್ಷದ ಪುರುಷ, 33 ವರ್ಷದ ಯುವಕ, ಹಡಿನಬಾಳದ 24 ವರ್ಷದ ಯುವಕ, 42 ವರ್ಷದ ಪುರುಷ, 52 ವರ್ಷದ ಮಹಿಳೆ, 37 ವರ್ಷದ ಮಹಿಳೆ, ಮಾಳಕೋಡದ 28 ವರ್ಷದ ಮಹಿಳೆ, 70 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಶಿರಸಿಯಲ್ಲಿಂದು 10 ಮಂದಿಗೆ ಸೋಂಕು
ಶಿರಸಿ ತಾಲೂಕಿನಲ್ಲಿ ಇಂದು 10 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನೀಲೆಕಣಿಯಲ್ಲಿ 1, ರಾಜೀವನಗರದಲ್ಲಿ 2, ಬನವಾಸಿಯಲ್ಲಿ 4, ಮಾರಿಕಾಂಬಾ ನಗರದಲ್ಲಿ 1, ವಿದ್ಯಾನಗರದಲ್ಲಿ 1, ಮರಾಠಿಕೊಪ್ಪದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಯಲ್ಲಾಪುರದಲ್ಲಿಂದು ಒಬ್ಬರಿಗೆ ಕೊರೊನಾ ದೃಢ
ಯಲ್ಲಾಪುರ ತಾಲೂಕಿನಲ್ಲಿ ಇಂದು ಓರ್ವರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 41 ಕ್ಕೆ ಏರಿದೆ.