ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 82 ಕರೊನಾ ಕೇಸ್ ದಾಖಲಾಗಿದ್ದು, ಇದೇ ವೇಳೆ ವಿವಿಧ ಆಸ್ಪತ್ರೆಯಿಂದ 78 ಮಂದಿ ಬಿಡುಗಡೆಯಾಗಿದ್ದಾರೆ. ಇಂದು 82 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12904ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿ 3 ಕೊರೋನಾ ಕೇಸ್

ಕುಮಟಾ ತಾಲೂಕಿನಲ್ಲಿ ಇಂದು 3 ಕರೊನಾ ಕೇಸ್ ದಾಖಲಾಗಿದೆ. ಕುಮಟಾ ನೆಲ್ಲಿಕೇರಿಯ 39 ವರ್ಷದ ಮಹಿಳೆ, 68 ವರ್ಷದ ವೃದ್ದ, 16 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.

RELATED ARTICLES  ಅ. 2೦ರಿಂದ 26 ರವರೆಗೆ ಯಕ್ಷ ಸಂಭ್ರಮ ಟ್ರಸ್ಟ್ ವತಿಯಿಂದ ಚತುರ್ಥ ತಾಳಮದ್ದಳೆ ಸಪ್ತಾಹ.

ಹೊನ್ನಾವರದಲ್ಲಿ ನಾಲ್ಕು ಕೊರೋನಾ ಕೇಸ್

ಹೊನ್ನಾವರ ತಾಲೂಕಿನಲ್ಲಿ ಇಂದು ನಾಲ್ವರಲ್ಲಿ ಪಾಸಿಟಿವ್ ಬಂದಿದೆ. ಮುಗ್ವಾ ಸುರಕಟ್ಟೆಯ 78 ವರ್ಷದ ಪುರುಷ, 72 ವರ್ಷದ ಮಹಿಳೆ, 12 ವರ್ಷದ ಬಾಲಕಿ, ನೀಲಕೋಡಿನ 65 ವರ್ಷದ ಪುರುಷ ಸೇರಿ ಇಂದು ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಶಿರಸಿಯಲ್ಲಿ 8 ಕೇಸ್

ಶಿರಸಿ ತಾಲೂಕಿನಲ್ಲಿ ಇಂದು 8 ಮಂದಿಗೆ ಕರನಾ ದೃಢಪಟ್ಟಿದೆ. ಇಂದು ಮಂಜವಳ್ಳಿಯಲ್ಲಿ 1, ಬೆಳ್ಳೂರು 1, ಅಂಬಾಗಿರಿ 3, ರಂಗಾಪುರ 1, ಹೆಬ್ಬತ್ತಿ 1, ಅಮ್ಮಚ್ಚಿಮನೆಯಲ್ಲಿ ಒಂದು ಕೊರೊನಾ ಪಾಸಿಟಿವ್ ಬಂದಿದೆ.

RELATED ARTICLES  ಸಮುದ್ರ ಪಾಲಾಗುತ್ತಿದ್ದ ತಾಯಿ ಮಗನ ರಕ್ಷಣೆ.

ಯಲ್ಲಾಪುರದಲ್ಲಿ ಇಂದು ಕೊರೋನಾ ಕೇಸ್ ಇಲ್ಲ.

ಯಲ್ಲಾಪುರದಲ್ಲಿ ಇಂದು ಯಾವುದೇ ಕೊರೊನಾ ಕೇಸ್ ಪತ್ತೆಯಾಗಿಲ್ಲ ಎಂಬುದು ಸಂತಸದ ವಿಷಯವಾಗಿದೆ.

ಅಂಕೋಲಾದಲ್ಲಿಂದು 1 ಕೊವಿಡ್ ಕೇಸ್

ಅಂಕೋಲಾ ತಾಲೂಕಿನಲ್ಲಿ 1 ಕೊವಿಡ್ ಕೇಸ್ ಪತ್ತೆಯಾಗಿದೆ. ಪಟ್ಟಣ ವ್ಯಾಪ್ತಿಯ ಇಸ್ಲಾಂಪುರದ 27ರ ಯುವಕನೊರ್ವನಲ್ಲಿ ಕೊವಿಡ್ ಪಾಸಿಟಿವ್ ಲಕ್ಷಣ ಕಂಡು ಬಂದಿದೆ.