ಹೊನ್ನಾವರ : ತಾಲೂಕಿನ ಸರಳಗಿ ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ ಎಂಬುವವರ ಮನೆಯ ಮೇಲೆ ಕಳೆದೆರಡು ದಿನಗಳ ಹಿಂದೆ ಉಂಟಾದ ಬಿರುಗಾಳಿಗೆ ಬ್ರಹತ್ ಆಕಾರದ ಮರವೊಂದು ಮನೆಯ ಮೇಲೆ ಬಿದ್ದು ಸಂಪೂರ್ಣ ಮನೆ ಕುಸಿದು ಬಿದ್ದಿದ್ದು ಬಡ ಸಂತ್ರಸ್ತರಿಗೆ ಸೂರು ಇಲ್ಲದಂತಾಗಿದೆ.

RELATED ARTICLES  ಹಡಿನಬಾಳದಲ್ಲಿ ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ

ಇಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ ಕುಟುಂಬದ ತುರ್ತು ನಿರ್ವಹಣೆಗಾಗಿ ಕುಟುಂಬಸ್ಥರಿಗೆ ವಯಕ್ತಿಕವಾಗಿ ಆರ್ಥಿಕ ನೆರವನ್ನು ನೀಡಿದರು.

ಮನೆಯು ಅರಣ್ಯ ಅತಿಕ್ರಮಣ ಜಾಗದಲ್ಲಿ ಇರುವ ಕಾರಣ ಸರ್ಕಾರದಿಂದ ನೆರೆಹಾವಳಿ ಮನೆ ಮಂಜೂರು ಮಾಡುವ ಕ್ರಿಯೆಗೆ ಮನೆಯ ದಾಖಲೆಗಳ ಸಮಸ್ಯೆ ಎದುರಾಗುವುದರಿಂದ, ಕುಟುಂಬಸ್ಥರ ಬಳಿ ಈಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ ಅವರು, ಸರ್ಕಾರದಿಂದ ಸಾಧ್ಯವಾದಷ್ಟು ಹೆಚ್ಚಿನ ವಿಶೇಷ ಆರ್ಥಿಕ ನೆರವನ್ನು ಕುಟುಂಬಕ್ಕೆ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES  ಬಿಜೆಪಿ ಅಭ್ಯರ್ಥಿ ಪರ‌ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸುಬ್ರಹ್ಮಣ್ಯ ‌ಶಾಸ್ತ್ರಿ