ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ಮೇಲಿನಕೇರಿಯ 32 ವರ್ಷದ ಪುರುಷ, 30 ವರ್ಷದ ಮಹಿಳೆ, ನೆಲ್ಲಿಕೇರಿಯ 72 ವರ್ಷದ ವೃದ್ಧ, ತೆಪ್ಪಾದ 41 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು 9 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

ಪ್ರಭಾತನಗರದ 55 ವರ್ಷದ ಪುರುಷ, 23 ವರ್ಷದ ಯುವಕ, ಪಟ್ಟಣದ ರಥಬೀದಿಯ 58 ವರ್ಷದ ಪುರುಷ,ಕಡತೋಕಾದ 48 ವರ್ಷದ ಮಹಿಳೆ, ಮಹಿಮೆಯ 71 ವರ್ಷದ ಮಹಿಳೆ, ಹೊಸಾಕುಳಿಯ 54 ವರ್ಷದ ಪುರುಷ, 28 ವರ್ಷದ ಯುವಕ, 5 ವರ್ಷದ ಬಾಲಕ, ಸೇರಿ ಇಂದು 9 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

RELATED ARTICLES  ಶ್ರೀ ಸಂಸ್ಥಾನದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನಂತಕುಮಾರ್ ಹೆಗಡೆ.

ಪಟ್ಟಣದ ರಜತಗಿರಿಯ 78 ವರ್ಷದ ಪುರುಷ ಕೊರೋನಾದಿಂದ ಸಾವನ್ನಪ್ಪಿದ್ದಾನೆ ಎಂದು ತಾಲೂಕಾ ವರದಿ ಲಭ್ಯವಾಗಿದೆ.

ಅಂಕೋಲಾದಲ್ಲಿಂದು ಮೂರು ಕೇಸ್

ಬಳಲೆಯ 45ರ ಮಹಿಳೆ, ಪಟ್ಟಣ ವ್ಯಾಪ್ತಿಯ ಮಠಾಕೇರಿಯ 44 ರ ಮಹಿಳೆಯಲ್ಲಿ, ಹಾಗೂ ಕೊರೊನಾ ವಾರಿಯರ್ಸ್ ಅಧಿಕಾರಿ ಸೇರಿದಂತೆ 3 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ.

ಶಿರಸಿಯಲ್ಲಿಂದು ಇಬ್ಬರಿಗೆ ಕೊರೊನಾ
ಶಿರಸಿ: ತಾಲೂಕಿನಲ್ಲಿ ಶನಿವಾರ 2 ಕೊರೊನಾ ಕೇಸ್ ದೃಢಪಟ್ಟಿದ್ದು, 21 ಮಂದಿ ಗುಣಮುಖರಾಗಿದ್ದಾರೆ.
ಇಂದು ಚಿಪಗಿಯಲ್ಲೇ 2 ಕರೊನಾ ಕೇಸ್ ಪತ್ತೆಯಾಗಿದೆ. ಈವರೆಗೆ 1473 ಮಂದಿಯಲ್ಲಿ ಕೊರೊನಾ ಕೆಸ್ ಪತ್ತೆಯಾಗಿದ್ದು, 1378 ಜನರು ಗುಣಮುಖರಾಗಿದ್ದಾರೆ.

RELATED ARTICLES  Financial Process Automation Using Rpa

ಯಲ್ಲಾಪುರದಲ್ಲಿ 17 ಜನರಿಗೆ ಕೊವಿಡ್ ಸೋಂಕು

ಯಲ್ಲಾಪುರ: ತಾಲ್ಲೂಕಿನಲ್ಲಿ 17 ಜನರಿಗೆ ಶನಿವಾರ ಕೊವಿಡ್ ಸೋಂಕು ದ್ರಢಪಟ್ಟಿದ್ದು, 55 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಎಂದು ತಾಲ್ಲೂಕು
ಆರೋಗ್ಯಾಧಿಕಾರಿ ನರೇಂದ್ರ ಪವಾರ್ ತಿಳಿಸಿದ್ದಾರೆ.

ಪಟ್ಟಣದ ಕಾಳಮ್ಮನಗರ 13, ಉದ್ಯಮನಗರ 2,ಆನಗೋಡದಲ್ಲಿ 2 ಒಂದು ಪ್ರಕರಣ ಇಂದು ದ್ರಢಪಟ್ಟಿದೆ. ತಾಲ್ಲೂಕಿನಲ್ಲಿ 53 ಸಕ್ರಿಯ ಪ್ರಕರಣವಿದ್ದು, ಇಂದು 55 ಜನರ ಗಂಟಲು ದ್ರವ ಪರೀಕ್ಷೆ
ಮಾಡಲಾಗಿದೆ.