ಕುಮಟಾ : ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನನ್ನ ಅರ್ಹತೆಯ ಮೇಲೆ ವಿಶ್ವಾಸ ಇರಿಸಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಲು ಅವಕಾಶ ಒದಗಿಸಿತು.ಈ ಸಂದರ್ಭದಲ್ಲಿ ಅನೇಕ ವಿಚಾರಗಳನ್ನು ಅರಿಯಲು ಅನುಕೂಲ ಆಯಿತು.ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಫಲಿತಾಂಶ ಕೇಂದ್ರಿಕೃತವಾಗಿದೆ, ಅನಿವಾರ್ಯವಾಗಿ ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕಾಗಿದೆ. ನೂತನ ಶಿಕ್ಷಣ ನೀತಿಯು ಅನುಷ್ಠಾನಕ್ಕೆ ಬಂದ ಬಳಿಕವಾದರೂ ಸಮಗ್ರ ಪ್ರಗತಿಯೇ ಶಿಕ್ಷಣ ಎಂಬುದು ಎಲ್ಲರಿಗೂ ಮನವರಿಕೆ ಆಗಬಹುದು ಎಂಬ ಆಶಯವನ್ನು ಕೊಂಕಣ ಎಜ್ಯುಕೇಶನ್ ಟೆಸ್ಟ್ ನ ಬಿ ಕೆ ಭಂಡಾರಕರ ಸರಸ್ವತಿ ಪದವಿಪೂರ್ವ ಕಾಲೇಜಿನ ನಿರ್ಗಮಿತ ಪ್ರಾಚಾರ್ಯೆ ಡಾಕ್ಟರ್ ಸುಲೋಚನಾ ರಾವ್ ಬಿ ಅವರು ಅನಿಸಿಕೆ ವ್ಯಕ್ತಪಡಿಸಿದರು.

 

ಇಂದು ಕಾಲೇಜಿನಲ್ಲಿ ಟ್ರಸ್ಟ್ ಹಾಗೂ ಉಪನ್ಯಾಸಕ ಸಿಬ್ಬಂದಿಗಳ ವತಿಯಿಂದ ಆಯೋಜಿತವಾದ ಕೃತಜ್ಞತಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಉದಾತ್ತ ಮತ್ತು ವಿಶಾಲ ದೃಷ್ಟಿಕೋನವನ್ನು ಕೊಂಡಾಡಿದರು.

RELATED ARTICLES  ಅಲ್ಪ ಅವಧಿಯಲ್ಲಿ ಅತೀಹೆಚ್ಚು ಓದುಗರನ್ನು ತಲುಪಿದ ಸತ್ವಾಧಾರ ನ್ಯೂಸ್ ನಲ್ಲಿ ಪ್ರಕಟವಾದ ಚಿದಾನಂದ ಭಂಡಾರಿಯವರು ಬರೆದ ಶ್ರೀಮಂತ ದೇಶದ ಬಡವನ ಕಥೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಅವರು ಡಾಕ್ಟರ್ ಸುಲೋಚನಾರಾವ್ ಅವರು ಪ್ರಾಚಾರ್ಯೆಯಾಗಿ ವಿವೇಚನೆಯಿಂದ ಕಾರ್ಯ ನಿರ್ವಹಿಸಿರುತ್ತಾರೆ. ಅವರು ವೈಯಕ್ತಿಕ ಕಾರಣಗಳಿಂದಾಗಿ ಪ್ರಾಚಾರ್ಯ ಹುದ್ದೆಯಿಂದ ನಿರ್ಗಮಿಸುತ್ತಾ ಇದ್ದಾರೆ. ಸಹೋದ್ಯೋಗಿಗಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಸಂಸ್ಥೆಯೊಂದಿಗೂ ಸಮನ್ವಯ ಸಾಧಿಸಿಕೊಂಡು ಬಂದ ಅವರ ಕಾರ್ಯವೈಖರಿ ಪ್ರಶಂಸನೀಯ, ಸಂಸ್ಥೆ ಅವರ ಸೇವೆಯನ್ನು ಇನ್ನೂ ಬಯಸಿತ್ತು ಆದರೆ ಅನಿವಾರ್ಯ ವಾಗಿ ಇಂದವರನ್ನು ಬೀಳ್ಕೊಡಬೇಕಾಗಿದೆ. ಮುಂದೆಯೂ ಅವರು ಸಂಸ್ಥೆಯ ಜೊತೆಸೇರಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಭರವಸೆ ಇದೆ. ಸಂಸ್ಥೆಯ ಬೆಳ್ಳಿಹಬ್ಬದ ಯಶಸ್ವಿಗೆ ಅವರ ಕೊಡುಗೆ ಸ್ಮರಣೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

RELATED ARTICLES  ಹೆಬಳೆ ಗೊರಟೆಕೇರಿ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ:

ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಕೇಂದ್ರದ ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಾವಿತ್ರಿ ಹೆಗಡೆ ವಿಧಾತ್ರಿಯ ಗುರುರಾಜ ಶೆಟ್ಟಿ ಉಪನ್ಯಾಸಕ ವಿನಯ್, ಉಪನ್ಯಾಸಕಿ ಗಾಯತ್ರಿ ಕಾಮತ್, ಸುಲೋಚನಾ ರಾವ್ ಅವರ ಸೇವಾ ಅವಧಿಯ ಸವಿ ಸಮಯವನ್ನು ಮೆಲಕು ಹಾಕಿದರು.

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ವಿಠಲ ಆರ್ ನಾಯಕ ಸುಲೋಚನಾ ರಾವ್ ಅವರಿಗೆ ಶುಭಕೋರಿದರು.ವಿಶ್ವಸ್ಥರಾದ ರಾಮನಾಥ ಕಿಣಿ,ಕಾಲೇಜಿನ ಮುಂದಿನ ಪ್ರಾಚಾರ್ಯರಾದ ಮಹೇಶ ಅಮೀನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಪದ್ಮನಾಭ ಅವರು ಪ್ರಾರ್ಥಿಸಿದರು. ಉಪನ್ಯಾಸಕಿ ಫರ್ಜಾನಾ ಶೇಖ ವಂದಿಸಿದರು.ಉಪನ್ಯಾಸಕ ಚಿದಾನಂದ ಭಂಡಾರಿ ಕಾಗಾಲ ಸ್ವಾಗತಸಿ ಕಾರ್ಯಕ್ರಮ ನಿರೂಪಿಸಿದರು.ಈ ವೇಳೆ ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.