ಕುಮಟಾ : ವಿಶೇಷ ಸಾಧನೆಯನ್ನು ಮಾಡಿ ಹೆಗಡೆ ಊರಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಿದ ಶಿಕ್ಷಕ ರವೀಂದ್ರ ಭಟ್ಟ ಸೂರಿಯವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಹೆಗಡೆಯ ಹಿರೇಬೀರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಊರಿನ ವಿವಿಧ ಸಮಾಜದ ಪ್ರಮುಖರು ಹಾಗೂ ಡಾ.ಜಿ.ಜಿ.ಹೆಗಡೆಯವರು ರವೀಂದ್ರ ಭಟ್ಟ ಸೂರಿಯವರನ್ನು ಸನ್ಮಾನಿಸಿದರು. ವಿವಿಧ ಸಮಾಜದ ಪ್ರಮುಖರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಂಜುನಾಥ ಪಟಗಾರ, ರಾಮದಾಸ ಬಾಳೇರಿ, ಕೆ.ಎಮ್.ಮುಕ್ರಿ, ಯೋಗೇಶ ಪಟಗಾರ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಂದ್ರ ಭಟ್ಟ ಸೂರಿ”ಹಿತ್ತಲ ಗಿಡ ಮದ್ದಲ್ಲ” ಎಂಬ ಮಾತಿದೆ. ನಮ್ಮೂರಿನ ವ್ಯಕ್ತಿಗಳು ಮಾಡಿದ ಸಾಧನೆ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ನೀವೆಲ್ಲ ನನ್ನನ್ನು ನಿಮ್ಮೂರಿನವನು ಎಂಬ ಅಭಿ‌ಮಾನದಿಂದ ಸನ್ಮಾನಿಸಿದ್ದೀರಿ. ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತಷ್ಟು ಸಾಧನೆ ಮಾಡಲು ಇದು ನನಗೆ ಪ್ರೇರಣೆ” ಎಂದರು.

RELATED ARTICLES  ವಿದ್ಯಾರ್ಥಿಗಳಿಗೆ ಕಲಿಕೋಪಕರಣ ಕೊಡುಗೆ ನೀಡಿದ ಸುಬ್ರಾಯ ವಾಳ್ಕೆ.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಖ್ಯಾತ ವೈದ್ಯರಾದ ಡಾ.ಜಿ.ಜಿ.ಹೆಗಡೆಯವರು ಮಾತನಾಡಿ ಸಾಧಕರನ್ನು ಗೌರವಿಸುವ ಸಂಪ್ರದಾಯ ಉತ್ತಮವಾದದ್ದು. ಇದು ಇನ್ನಷ್ಟು ಜನರಿಗೆ ಸಾಧನೆಗೆ ಪ್ರೇರಣೆಯನ್ನು ನೀಡುತ್ತದೆ. ಸೂರಿಯವರ ಕಾರ್ಯ ನಿರ್ವಹಣಾ ಸಾಮರ್ಥ್ಯ ಅದ್ಭುತವಾದದ್ದು. ಅವರು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ವಿವಿಧ ರಂಗದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಯನ್ನು ಒಂದೇ ವರ್ಷದಲ್ಲಿ ಪಡೆದು ಮಾಡಿದ ವಿಶೇಷ ಸಾಧನೆ ನಮ್ಮ ಊರಿಗೆ ಹೆಮ್ಮೆ ಎಂದರು. ಅಮರನಾಥ ಭಟ್ಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹೆಗಡೆ ಊರಿನ ವಿವಿಧ ಸಮಾಜದ ಮುಖಂಡರು ಹಾಗೂ ನಾಗರಿಕರು ಹಾಜರಿದ್ದರು.

RELATED ARTICLES  ನಿಧಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ? : ಘಟನೆ ಕೇಳಿ ಬೆಚ್ಚಿದ ಉತ್ತರ ಕನ್ನಡ.