ಕೊಂಕಣ ಎಜ್ಯುಕೇಶನ್ ಟ್ರಸ್ಟ ಕುಮಟಾದ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ 2016-17ನೇ ಸಾಲಿನ ಪಿ.ಯು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪಾಲಕರ ಸಭೆ
ನಡೆಯಿತು.
ಸಂಸ್ಥೆಯ ಪಾಂಶುಪಾಲರ ಪ್ರಾಸ್ತವಿಕ ನುಡಿಗಳ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡು, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಕುಮಾರಿ ಪೂಜಾ ಉಲ್ಲಾಸ ನಾಯಕ
(ವಾಣಿಜ್ಯ ವಿಭಾಗದಲ್ಲಿ 98% ಪಡೆದು ರಾಜ್ಯಕ್ಕೆ 8ನೇ ಸ್ಥಾನ ಮತ್ತು ಜಿಲ್ಲೆಗೆ ದ್ವಿತೀಯ ಸ್ಥಾನ, ತಾಲೂಕು ಪ್ರಥಮ), ಕುಮಾರಿ
ಪ್ರಿಯಾಂಕ ನಾಯಕ(ವಿಜ್ಞಾನ ವಿಭಾಗದಲ್ಲಿ 93.67%, ನೀಟ್ ನಲ್ಲಿ
93.90% ), ಕುಮಾರಿ ಕಾತ್ಯಾಯಿನಿ ಭಟ್ (ವಿಜ್ಞಾನ ವಿಭಾಗದಲ್ಲಿ 93.17%
ನೀಟಿನಲ್ಲಿ 88.88 ಪರಸನ್ ಟಾಯಿಲ್) ಕುಮಾರ ಚಿನ್ಮಯ ನಾಯಕ (ವಿಜ್ಞಾನ ವಿಭಾಗದಲ್ಲಿ 85.5%. ಜೆಇಇ ಮೆನ್ಸ್ ನಲ್ಲಿ ಅರ್ಹತೆಯನ್ನು ಪಡೆದು ಎನ್ .ಐ.ಟಿ.ಕೆ, ಸುರತ್ಕಲ್ ನಲ್ಲಿ ಪ್ರವೇಶಾತಿ ಪಡೆದಿದ್ದಾನೆ)
ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ತಪಸ್ಯ ಲರ್ನಿಂಗ್ ಪ್ರೈವೆಟ್ ಲಿಮಿಟೆಡ್‍ನ ಶಿಕ್ಷಣ ತಜ್ಞರಾದ ಶ್ರೀ ಸಿ.ವಿ.ಎನ್. ಶಾಸ್ತ್ರಿಯವರು ಪಾಲಕರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ
ಅಧ್ಯಕ್ಷರಾದ ಶ್ರೀ ಕಾಶೀನಾಥ ನಾಯಕರವರು ವಹಿಸಿ ಅಧ್ಯಕ್ಷೀಯ ಮಾತುಗಳನಾಡಿದರು. ಸಂಸ್ಥೆಯ ಗೌರವನ್ವಿತ ಕಾರ್ಯದರ್ಶಿಯಾದ ಮುರಳಿಧರ ಪ್ರಭು ಪಾಲಕರ
ಸಮಸ್ಯೆಗಳಿಗೆ ಸ್ಪಂದಿಸಿದರು. ವೇದಿಕೆಯಲ್ಲಿ ವಿಶ್ವಸ್ಥರಾದ ರಾಮನಾಥ ಕಿಣಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪರ್ಜನಾ ಶೇಖ್ ಮತ್ತು ಶೃತಿ ಭಂಡಾರಿ ನಿರೂಪಿಸಿ, ಶ್ರೀಮತಿ ಗಾಯತ್ರಿ ಕಾಮತ್ ವಂದರ್ನಾಪಣೆ
ಗೈದರು. ಗೀತಾ ಮೂಳೆ ಯವರು ಪಾರ್ಥಿಸಿದರು.