ಕುಮಟಾ : ಬ್ಯಾಂಕಿಂಗ್ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಕನ್ನಡ ಅನುಷ್ಠಾನಕ್ಕೆ ಹೋರಾಡಬೇಕಾದ ಅಗತ್ಯತೆ ಇದೆ. ಎಲ್ಲಾ ರಾಜ್ಯಗಳೂ ಅವರ ಭಾಷೆಯ ಬಗ್ಗೆ ಒಗ್ಗೂಡಿ ಹೋರಾಟ ಮಾಡುತ್ತಿದ್ದಾರೆ. ನಾವುಗಳೂ ಸಹ ಒಂದುಗೂಡುವ ಕಾರ್ಯ ಆಗಬೇಕು ಎಂದು ಶಾಸಕರಾದ ದಿನಕರ‌ ಶೆಟ್ಟಿಯವರು ತಿಳಿಸಿದರು.

ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಎಲ್ಲ ಕನ್ನಡಿಗರ ಮೇಲಿದೆ. ರಾಜ್ಯೋತ್ಸವ ಕಾರ್ಯಕ್ರಮವೆನ್ನುವುದು ಕೇವಲ ಔಪಚಾರಿಕತೆಯಾಗದೇ ಇದು ಎಲ್ಲಾ ಕನ್ನಡ ಮನಸ್ಸುಗಳನ್ನು ತಟ್ಟುವಂತಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಣಕಿ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕನ್ನಡಗರಿಗೆ ಸಕಲ ಸೌಲಭ್ಯಗಳನ್ನು ದೊರಕುವಂತಾಗಬೇಕು. ರೈಲ್ವೆ ಮುಂತಾದ ಕೇಂದ್ರದ ಯೋಜನೆಗಳಲ್ಲಿ ಕನ್ನಡಿಗರಿಗೆ ಅಗತ್ಯ ಪ್ರಾಶಸ್ತ್ಯಗಳು ದೊರಕಬೇಕು ಎಂದು ಅಭಿಪ್ರಾಯಪಟ್ಟರು.
ನಾಡಗೀತೆ ಹಾಗೂ ರೈತಗೀತೆ ಹಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಶುಭ ಹಾರೈಸಿದರು.

RELATED ARTICLES  "ನಾವು ನಮ್ಮಿಷ್ಟ" ದಶಮಾನೋತ್ಸವ ನಾಳೆ.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾ ಅಧ್ಯಕ್ಷ ಶ್ರೀಧರ ಗೌಡ ಮಾತನಾಡಿ ಕನ್ನಡದ ಕುರಿತು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ನೌಕರ ವರ್ಗ ಪುಸ್ತಕ ಬರೆಯಬಾರದು ಎಂಬ ಬಗ್ಗೆ ಸರಕಾರ ಮಸೂದೆಯನ್ನು ತರಲು ಹೊರಟಿರುವುದು ನೋವಿನ ಸಂಗತಿ, ಈರೀತಿಯಾದರೆ ಸಾಹಿತ್ಯ ಎತ್ತ ಸಾಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

RELATED ARTICLES  ಹೆಗಡೆ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

ಸಹಾಯಕ ಆಯುಕ್ತರಾದ ಎಂ.ಅಜಿತ್ ಮಾತನಾಡಿ ಕರ್ನಾಟಕ ಏಕೀಕರಣದ ಬಗ್ಗೆ ಇತಿಹಾಸ ತಿಳಿಸಿದರು. ಎಲ್ಲರೂ ಮಾಸ್ಕ ಧರಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಮೇಘರಾಜ ನಾಯ್ಕ,ಸಿ.ಇ.ಓ ಸಿ.ಟಿ ನಾಯ್ಕ, ಬಿ.ಇ.ಓ ರಾಜೇಂದ್ರ ಭಟ್ಟ, ಪುರಸಭಾ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.