ಕುಮಟಾ: ಕನ್ನಡ ಭಾಷೆಯ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಭಾಷೆಯ ಉಳಿವಿಗಾಗಿ ಕನ್ನಡಿಗರು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್. ಕೆ. ಅಭಿಪ್ರಾಯಪಟ್ಟರು.

ಪಟ್ಟಣದ ಪುರಭವನದಲ್ಲಿ ನುಡಿ ಹಬ್ಬ ಸಮಿತಿ ವತಿಯಿಂದ ಆಯೋಜಿಸಲಾದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ನುಡಿಹಬ್ಬ ಸಮಿತಿ ಕಳೆದ ಹತ್ತು ವರ್ಷಗಳಿಂದ ಕನ್ನಡದ ಉಳಿವಿಗಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಕೊರೊನಾದಂತ ಸಂದಿದ್ಗತೆಯಲ್ಲೂ ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

RELATED ARTICLES  ರಾಜಕೀಯ ದೂರವಿಟ್ಟು ಅಭಿವೃದ್ಧಿ ಮಾಡೋಣ -ರತ್ನಾಕರ ನಾಯ್ಕ ಆಶಯ

ಪ್ರಮುಖರಾದ ಡಾ ಜಿ.ಜಿ.ಹೆಗಡೆ ಮಾತನಾಡಿ, ಹೆತ್ತ ತಾಯಿಯನ್ನು ಗೌರವಿಸುವಂತೆ ಕನ್ನಡ ತಾಯಿಯನ್ನು ಗೌರವಿಸುವಂತಾಗಲಿ. ಮಾತ್ರ ಭಾಷೆಯ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.

ನುಡಿ ಹಬ್ಬ ಸಮಿತಿ ಅಧ್ಯಕ್ಷ ಪ್ರೊ.ಎಮ್.ಜಿ.ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಮಿತಿ ಉತ್ತಮ ಕಾರ್ಯ ಮಾಡುತ್ತ ಬಂದಿದೆ. ಮುಂದೆಯೂ ನಮ್ಮೆಲ್ಲ ಮಿತ್ರರೊಂದಿಗೆ ಸೇರಿ ಇನ್ನಷ್ಟು ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

RELATED ARTICLES  ಮಳೆಯ ಅವಾಂತರ : ಉತ್ತರಕನ್ನಡದಲ್ಲಿ ಮೊದಲ ಬಲಿ..?

ಕ. ಸಾ. ಪ ತಾಲೂಕಾದ್ಯಕ್ಷ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ, ಮಾತೃ ಭಾಷೆ ಉಳಿಸಿ ಬೆಳೆಸುವ ಮೂಲಕ ತಾಯಿ ಭುವನೇಶ್ವರಿಯ ಸೇವೆಗೆ ಕಂಕಣ ಬದ್ಧರಾಗೋಣ ಎಂದರು.

ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಶಿಕ್ಷಕ ದಯಾನಂದ ದೇಶಭಂಡಾರಿ ವಂದಿಸಿದರು