ಕುಮಟಾ: ತಾಲೂಕಿನ ಹೆಗಡೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ರೇಲ್ವೆಗೇಟ್ ಹಾಕಿದಾಗ ನೂರಾರು ವಾಹನ ಸವಾರರು ಪರ್ಯಾಯವಾಗಿ ಬಳಸುವ ಸಾರಿಂಗ ದೇವಸ್ಥಾನದ ಎದುರಿನ ಒಳ ರಸ್ತೆಯು ಮಳೆಗಾಲದಲ್ಲಿ ಸಂಪೂರ್ಣ ಕೊಚ್ಚಿಹೋಗಿ ನಿರುಪಯುಕ್ತವಾಗಿತ್ತು. ಇದನ್ನು ಗಮನಿಸಿದ ಹೆಗಡೆಯ ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕರು ತಮ್ಮ ಸ್ವಂತ ಹಣದಿಂದ ಯಂತ್ರೋಪಕರಣ ಬಳಸಿ ಜನರ ಬಳಕೆಗೆ ಅನುಕೂಲವಾಗುವಂತೆ ರಸ್ತೆಯನ್ನು ದುರಸ್ತಿಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಪುರಸಭೆ ವ್ಯಾಪ್ತಿಗೆ ಸನಿಹವಿರುವ ಹೆಗಡೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ರೇಲ್ವೆಗೇಟ್ ಹಾಕಿದ ಸಂದರ್ಭದಲ್ಲಿ ವಾಹನ ಸವಾರರು ಬಹಳ ಸಮಯ ರಸ್ತೆಯಲ್ಲಿಯೇ ನಿಂತು ಕಾಯಬೇಕಾದ ಅನಿವಾರ್ಯತೆಯಿದ್ದು, ಇಂಥ ಸಂದರ್ಭದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರು ಪರ್ಯಾಯವಾಗಿ ಸಾರಿಂಗ ದೇವಸ್ಥಾನದ ಎದುರಿನ ಮಣ್ಣಿನ ರಸ್ತೆಯನ್ನು ಅವಲಂಬಿಸುತ್ತಾರೆ. ಆದರೆ ಈ ರಸ್ತೆಯು ಪ್ರತಿ ವರ್ಷದ ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣ ಕೊಚ್ಚಿಹೋಗಿ, ವಾಹನಗಳು ಅಲೆದಾಡದಂತಹ ದುಸ್ತಿತಿಗೆ ತಲುಪುತ್ತದೆ.

RELATED ARTICLES  ಹಾಲಕ್ಕಿಗಳಜೊತೆ ಸುಗ್ಗಿಗೆ ಹೆಜ್ಜೆ ಹಾಕಿದ ಅನಂತ್ ಕುಮಾರ್ ಹಾಗೂ ಕಾರವಾರದ ನಾಗರಾಜ ನಾಯಕ

ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಸಹ ಸಾರಿಂಗ ದೇವಸ್ಥಾನದ ಎದುರಿನ ಒಳರಸ್ತೆ ಸಂಪೂರ್ಣ ಕೊಚ್ಚಿಹೋಗಿ, ವಾಹನ ಸವಾರರು ಪರದಾಡುವಂತಾಗಿತ್ತು. ಇದನ್ನು ಗಮನಿಸಿದ ಹೆಗಡೆಯ ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕ ಅವರು ತಮ್ಮ ಸ್ವಂತ ಹಣದಿಂದ ಯಂತ್ರೋಪಕರಣ ಬಳಸಿ, ರಸ್ತೆಯನ್ನು ಸಂಪೂರ್ಣ ದುರಸ್ತಿಪಡಿಸಿ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿದ್ದಾರೆ.

RELATED ARTICLES  ಪಾದಯಾತ್ರೆಯ ಮೂಲಕ ಸಂಚರಿಸಿ ಮತಯಾಚನೆ ಮಾಡಲಾಗುವುದು: ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ರವೀಂದ್ರ ಎ.ನಾಯ್ಕ

ಗಣೇಶ ನಾಯ್ಕರ ನಿಸ್ವಾರ್ಥ ಮನೋಭಾವನೆಯ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರು ಹಾಗೂ ಊರ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ