ಕಾರವಾರ: ಗಣಪತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ಪೌರ ಕಾರ್ಮಿಕನೋರ್ವ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಲಮೆ ಕೆರೆಯಲ್ಲಿ ನೆಡೆದಿದೆ.
ರಾಜೀವ ನಗರದ ಅಣ್ಣಪ್ಪ ಮಹದೇವ ಹರಿಜನ (೨೬) ಮೃತ ದುರ್ದೈವಿಯಾಗಿದ್ದು ಮೃತ ವ್ಯಕ್ತಿ ಕಸ ಸಂಗ್ರಹಿಸುವ ಗುತ್ತಿಗೆ ಪೌರಕಾರ್ಮಿಕನಾಗಿ ಕಾರ್ಯ ನಿರ್ವಹಿಸುತಿದ್ದ. ಸಾರ್ವಜನಿಕವಾಗಿ ಪ್ರತಿಷ್ಟಾಪಿಸಿದ ಗಣಪತಿಯನ್ನು ಐದನೇ ದಿನ ಕೆರೆಯಲ್ಲಿ ವಿಸರ್ಜನೆ ಮಾಡುವಾಗ ಮುಳಗಿ ಸಾವನಪ್ಪಿದ್ದಾನೆ. ಈ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.