ಶ್ರೀರಾಮಚಂದ್ರಾಪುರಮಠದ ಧರ್ಮಕರ್ಮವಿಭಾಗದ ವತಿಯಿಂದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದಗಳೊಂದಿಗೆ ದಿನಾಂಕ 26-8-2017 ನೇ ಶನಿವಾರ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ “ಭದ್ರಭವಿಷ್ಯ” ಜ್ಯೌತಿಷಾಲಯವು ಶುಭಾರಂಭಗೊಂಡಿತು. ಪ್ರಾತಃಕಾಲ ನವಗ್ರಹಪೂಜೆ, ಶ್ರೀ ದಕ್ಷಿಣಾಮೂರ್ತಿ ಪೂಜೆ, ಶ್ರೀ ಉಮಾಶಿವ ಸನ್ನಿಧಿಯಲ್ಲಿ ಪ್ರಾರ್ಥನೆಯ ನಂತರ ವೇ.ಮೂ.ಶ್ರುತಿಸಾಗರ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳವರು ಗೋಪೂಜೆ ನಡೆಸಿ ಗೋಗ್ರಾಸ ಸಮರ್ಪಿಸಿ ದೀಪ ಬೆಳಗಿಸುವ ಮೂಲಕ ” ಭದ್ರ-ಭವಿಷ್ಯ” ಜ್ಯೌತಿಷಾಲಯವನ್ನು ಶುಭಾರಂಭಗೊಳಿಸಿ ಶ್ರೀಗುರುಗಳ ಆಶೀರ್ವಾದದಿಂದ ಈ ಜ್ಯೌತಿಷ ಕೇಂದ್ರವು ಸಮಾಜಕ್ಕೆ ದಾರಿದೀಪವಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ರುಕ್ಮಯ್ಯ ಪೂಜಾರಿ, ಹಿರಿಯ ಜ್ಯೌತಿಷಿ ಮಿತ್ತೂರು ರಾಮಕೃಷ್ಣ ಭಟ್ ಮೂಡಾಯಿಬೆಟ್ಟು, ಜ್ಯೌತಿಷಾಲಯದ ಸಂಚಾಲಕ ಜ್ಯೌತಿಷಿ ಮಿತ್ತೂರು ಲಕ್ಷ್ಮೀನಾರಾಯಣ ಭಟ್ ಮೂಡಾಯಿಬೆಟ್ಟು, ಧರ್ಮ ಕರ್ಮ ವಿಭಾಗದ ಸಹಕಾರ್ಯದರ್ಶಿ ಕೇಶವಪ್ರಸಾದ ಭಟ್ ಕೂಟೇಲು, ಜ್ಯೌತಿಷಿ ಸದಾನಂದ ಕಾರಂತ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಕೋಶಾಧ್ಯಕ್ಷ ರಮೇಶ ಭಟ್ ನೂಜಿಬೈಲು, ಮಂಡಲ ಗುರಿಕ್ಕಾರ ಉದಯ ಕುಮಾರ್ ಖಂಡಿಗ, ಉಪ್ಪಿನಂಗಡಿ ಮಂಡಲ ಸಂಸ್ಕಾರ ಪ್ರಧಾನ ಮುಕುಂದ ಶರ್ಮಾ ಬರೆಪ್ಪಾಡಿ, ಕಲ್ಲಡ್ಕ ವಲಯ ಸಂಸ್ಕಾರ ಪ್ರಧಾನ ಶ್ಯಾಮ ಭಟ್ ಪಂಜಿಗದ್ದೆ, ಉಮಾಶಿವ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಹಾಗೂ ಸಮಿತಿಯ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಕುಮಟಾಕ್ಕೆ ಬಿ.ಕೆ ಹರಿಪ್ರಸಾದ್ ಭೇಟಿ.

ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಶ್ರೀಯುತ ಸೇರಾಜೆ ಸುಬ್ರಹ್ಮಣ್ಯ ಭಟ್ಟರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಧರ್ಮಕರ್ಮ ಸಹಕಾರ್ಯದರ್ಶಿ ಕೂಟೇಲು ಕೇಶವಪ್ರಸಾದ ಭಟ್ಟರು ಕಾರ್ಯಕ್ರಮ ನಿರೂಪಿಸಿದರು. ಸೇವಾಸಮಿತಿಯ ಅಧ್ಯಕ್ಷರಾದ ರಾಕೋಡಿ ಈಶ್ವರ ಭಟ್ಟರು ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ಶ್ರೀಕ್ಷೇತ್ರದ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಪ್ರತೀ ಭಾನುವಾರ ಬೆಳಗ್ಗೆ 9 ರಿಂದ ಸಾಯಂಕಾಲ 4 ರ ತನಕ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ “ಭದ್ರಭವಿಷ್ಯ” ಜ್ಯೋತಿಷಾಲಯವು ಕಾರ್ಯನಿರ್ವಹಿಸಲಿದೆ. ಮುಂಚಿತವಾಗಿ ತಿಳಿಸಿದಲ್ಲಿ ಅವಕಾಶಕ್ಕನುಗುಣವಾಗಿ ವಾರದ ಇತರ ದಿನಗಳಲ್ಲೂ ಚಿಂತನೆಯ ವ್ಯವಸ್ಥೆ ಮಾಡಲಾಗುವುದು.
* ಪ್ರಶ್ನಚಿಂತನೆ, ಜಾತಕವಿಮರ್ಶೆ, ಮುಹೂರ್ತ ಇತ್ಯಾದಿ ವಿಚಾರಗಳನ್ನು ಶಾಸ್ತ್ರೀಯವಾಗಿ ತಿಳಿಸಲಾಗುತ್ತದೆ.
* ಕಾಲಗತಿಗನುಗುಣವಾಗಿ ಕರ್ಮಬಂಧನದಲ್ಲಿ ಸಿಲುಕಿ ಕಷ್ಟಗಳನ್ನನುಭವಿಸುವ ಶಿಷ್ಯಭಕ್ತರು ಕಷ್ಟಗಳಿಂದ ಬಿಡುಗಡೆ ಪಡೆದು ನೆಮ್ಮದಿಯ ಜೀವನಮಾರ್ಗವನ್ನು ಕಂಡುಕೊಳ್ಳಲು ಶಾಸ್ತ್ರೀಯ ಜ್ಯೌತಿಷ ಚಿಂತನೆಯ ಅಗತ್ಯವನ್ನು ಮನಗಂಡ ಶ್ರೀಸಂಸ್ಥಾನದವರು ಶ್ರೀಮಠದ ಧರ್ಮಕರ್ಮ ವಿಭಾಗದ ಅಂಗವಾಗಿ ” ಭದ್ರಭವಿಷ್ಯ ” ಎಂಬ ವಿಭಾಗವನ್ನು ಆರಂಭಿಸುವಂತೆ ನಿರ್ದೇಶಿಸಿರುತ್ತಾರೆ. ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದ ಪ್ರಕಾರ ಇಲ್ಲಿ ತಜ್ಞ ಜ್ಯೌತಿಷಿಗಳು ಶಾಸ್ತ್ರೀಯ ಚಿಂತನೆ ನಡೆಸಿ ಸಮಸ್ಯೆಗಳಿಗೆ ಜ್ಯೌತಿಷ ಶಾಸ್ತ್ರಾನುಸಾರ ಸೂಕ್ತ ಪರಿಹಾರಗಳನ್ನು ಸೂಚಿಸುತ್ತಾರೆ.

RELATED ARTICLES  ಯಶಸ್ವಿಯಾಗಿ ಜರುಗಿದ "ವಿವೇಕ ನಗರ ಉತ್ಸವ".

ಭದ್ರಭವಿಷ್ಯ ಕಾರ್ಯಾಲಯ ಸಂಪರ್ಕ- ಲಕ್ಷ್ಮೀನಾರಾಯಣ ಭಟ್, ಜ್ಯೌತಿಷಿ – 9448332162
ಶ್ರೀ ಉಮಾಶಿವ ಕ್ಷೇತ್ರ, ಕಲ್ಲಡ್ಕ-08255-275333
ಧರ್ಮಕರ್ಮ ವಿಭಾಗ ಸಂಪರ್ಕ- 9480159191….9449595212…..9448911113