ಹೊನ್ನಾವರ: ಕಳ್ಳತನ ಪ್ರಕರಣಗಳು ಒಂದೆಡೆಯಾದರೆ, ಇನ್ನೊಂದೆಡೆ ಅಕ್ರಮ ಗೋಸಾಗಾಟ ಉತ್ತರಕನ್ನಡದಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ.
ಯಲ್ಲಾಪುರ,ಶಿರಸಿ, ಭಟ್ಕಳ ಇನ್ನು ಮುಂತಾದ ತಾಲೂಕಿನಲ್ಲಿ ಗೋಸಾಗಾಟ ಅಕ್ರಮವಾಗಿ ನಡೆಯುತ್ತಿದ್ದ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಹಿಂದೆಯೂ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಹೊನ್ನಾವರ ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬುಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಗೋ ಸಾಗಟ ತೊಡಗಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು 9 ಗೋವುಗಳನ್ನು ರಕ್ಷಿಸಿದ ಘಟನೆ ವರದಿಯಾಗಿದೆ.
ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಬುಲೆರೋ ವಾಹನದಲ್ಲಿ 3 ಆಕಳು, 4 ಹೋರಿ 2 ಕೋಣ ಸೇರಿ ಒಟ್ಟೂ 9 ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಶೇಡಿಮುಲೆ ಕ್ರಾಸ್ ಬಳಿ ಮಂಕಿ ಠಾಣಾ ಪಿಎಸೈ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಈ ಪ್ರಕರಣವನ್ನು ಬೇಧಿಸಿದ್ದಾರೆ.
ಭಟ್ಕಳ ಮೂಲದ ಮೆಹಬೂಬಲಿ, ಸೈಯದ್ ಇಬ್ರಾಹಿಮ್, ಸಿದ್ದಿಕಾ ಮಹಮ್ಮದ್ ಮಝಾರ, ಜುಕ್ವಾನ, ಇವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಬುಲೆರೋ ವಾಹನದ ಜೊತೆ ಹುಂಡೈ ಕಂಪನಿಯ ಕ್ರೇಟಾ ಕಾರು, ಮೂರು ಮೊಬೈಲ್ ಹಾಗೂ 35,210 ನಗದನ್ನು ವಶಪಡಿಸಿಕೊಳ್ಳಲಾಗಿದೆ.
(ಸಾಂದರ್ಭಿಕ ಚಿತ್ರ ಬಳಸಿದೆ)