ಗೋಕರ್ಣ :ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ” ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರೂಢಿಗತ ಪರಂಪರೆಯಂತೆ ಸ್ವಾತಿ ಉತ್ಸವವು ಇಂದು ಮುಂಜಾನೆ ಜರುಗಿತು.
ಗೋಕರ್ಣದ ಹೊಸ್ಮನೆ ಕುಟುಂಬದವರು ಹಿಂದಿನ ಪದ್ಧತಿಯಂತೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕೋವಿಡ್ 19 ಮುಂಜಾಗ್ರತೆ ಕ್ರಮವಾಗಿ ಕಾರ್ಯಕ್ರಮವನ್ನು ಸರಳವಾಗಿ, ನಿಯಮಗಳ ಅನುಸಾರವಾಗಿ ನಡೆಸಲಾಯಿತು.
ಸ್ವಾತಿ ಮಳೆಯ ನೀರಿನಿಂದ ಹೊಸ ಮಜ್ಜಿಗೆಯನ್ನು ತಯಾರಿಸಿ, ದೇವರ ಉತ್ಸವವು ಶ್ರೀ ದೇವಾಲಯದಿಂದ ಹೊರಟು ರಥಬೀದಿ, ಕೋಟಿತೀರ್ಥ ಕಟ್ಟೆ ಸುತ್ತುವರೆದು ನಾಗಬೀದಿ ಮುಖಾಂತರ ಸಂಚರಿಸಿ ಈ ಮಜ್ಜಿಗೆಯನ್ನು ವಿತರಿಸುತ್ತಾ ಶ್ರೀ ದೇವಾಲಯಕ್ಕೆ ಹಿಂದಿರುಗಿತು.
ಶ್ರೀ ದೇವಾಲಯದಲ್ಲಿ ದೇವರಾಜ್ ಉಪಚಾರ, ಪೂಜೆಯೊಂದಿಗೆ ಈ ಉತ್ಸವವು ಸಂಪನ್ನಗೊಂಡಿತು. ಅರ್ಚಕರಾದ ವೇ||ಮೂ|| ಶಿವ ಬಟ್ ಷಡಕ್ಷರಿ ಇವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.