ಜಯಾ ಯಾಜಿಗೆ ಪ್ರಶಸ್ತಿ ; ಸಂಧ್ಯಾ, ಗಣೇಶ, ಸುಧಾರಾಣ , ರಾಘವೇಂದ್ರ ಅವರಿಗೆ ಯುವ ಪುರಸ್ಕಾರ.

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2020 ಪ್ರದಾನ ಸಮಾರಂಭವನ್ನು ನ.8 ರಂದು ಭಾನುವಾರ ಮಧ್ಯಾಹ್ನ 3.30 ಕ್ಕೆ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ನಾಡಿನ ಹಿರಿಯ ಕಥೆಗಾರ್ತಿ ಜಯಾ ಯಾಜಿ ಶಿರಾಲಿ ಅವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಸಸ್ತಿ ಪ್ರದಾನ ಮಾಡಲಾಗುತ್ತಿದ್ದು, ಉದಯೋನ್ಮುಖ ಬರಹಗಾರರಾದ ಕುಮಟಾದ ಸಂದ್ಯಾ ನಾಯ್ಕ ಅಘನಾಶಿನಿ, ಹೊನ್ನಾವರದ ಗಣೇಶ ಜೋಶಿ ಸಂಕೊಳ್ಳಿ, ಸಿದ್ದಾಪುರದ ಸುಧಾರಾಣ ನಾಯ್ಕ, ಶಿರಸಿಯ ರಾಘವೇಂದ್ರ ಡಿ. ಶೇಟ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಸಿ.ವಿ.ಎಸ್.ಕೆ ಪ್ರೌಢಶಾಲೆ

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು ಹಿರಿಯ ಸಾಹಿತಿ ಡಾ. ಸೈಯ್ಯದ್ ಝಮೀರುಲ್ಲಾ ಷರೀಫ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ.

RELATED ARTICLES  ಹೋರಾಟದಲ್ಲಿ ಮೃತಪಟ್ಟ ಮಹಿಳೆಗೆ ಪರಿಹಾರ ವಿತರಣೆ.

ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಜನತಾ ವಿದ್ಯಾಲಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ, ಕುಮಟಾ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ, ಕವಿ ಸಂದೇಶ್ ಎಚ್. ರತ್ನಪುರಿ ಮೈಸೂರು ಅವರು ಆಗವಿಸಲಿದ್ದಾರೆ ಎಂದು ಭಟ್ಕಳ ತಾಲೂಕು ಕ.ಸಾ.ಪ. ಅಧ್ಯಕ್ಷ ಶಂಕರ ನಾಯ್ಕ ಶಿರಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.