ಕುಮಟಾ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ವತಿಯಿಂದ ಮಹಿಳೆಯರಿಗೆ ಕುಟುಂಬ ಯೋಜನೆಯಲ್ಲಿ ಸಿಗುವ ಸೌಲಭ್ಯ, ಗರ್ಭಕೋಶದ ಸಮಸ್ಯೆ ಹಾಗೂ ಕುಟುಂಬ ಯೋಜನಾ ನಿಯಂತ್ರಣ ಕ್ರಮಗಳ ಕುರಿತಾಗಿ ಜಾಗೃತಿ ಕಾರ್ಯಕ್ರಮ.
ಶಾಶ್ವತ & ತಾತ್ಕಾಲಿಕ ಕುಟುಂಬ ಯೋಜನಾ ನಿಯಂತ್ರಣಾ ವಿಧಾನ, ಗರ್ಭಕೋಶದಲ್ಲುಂಟಾಗುವ ತೊಂದರೆ, ಸ್ತನ ಕ್ಯಾನ್ಸರ್ ಹಾಗೂ ಸ್ವಚ್ಛತೆಯ ಕುರಿತಾಗಿ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ವೈದ್ಯಾಧಿಕಾರಿಯಾದಂತಹ ಡಾ|| ಸನ್ಮತಿ ಹೆಗಡೆ ಮಾತನಾಡಿದರು.
ಕುಟುಂಬ ಯೋಜನಾ ಸೌಲಭ್ಯದ ಕುರಿತಾಗಿ ಈ ಕಾರ್ಯಕ್ರಮದ ಅತಿಥಿ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್‍ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಮಾಹಿತಿ ನೀಡಿದರು.
ಕುಷ್ಠರೋಗದ ಲಕ್ಷಣಗಳ ಕುರಿತಾಗಿ ಆಶಾ ಕಾರ್ಯಕರ್ತೆಯಾದಂತಹ ಶೀಮತಿ ಆಶಾ ನಾಗೇಕರ್ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಮುಕ್ರಿ ಸ್ವಾಗತಿಸಿ ವಂದಿಸಿದರು.