ಉತ್ತರ ಕನ್ನಡದ ಪ್ರಮುಖ ತಾಲೂಕುಗಳಾದ ಕುಮಟಾ-ಹೊನ್ನಾವರ ಶಿರಸಿ ಯಲ್ಲಾಪುರದಲ್ಲಿ ಕರೋನಾ ಪ್ರಕರಣಗಳು ಯಾವ ರೀತಿ ಇದೆ ಮುದರ ಅಪ್ಡೇಟ್ ಇಲ್ಲಿದೆ.
ಕುಮಟಾದಲ್ಲಿ ಏಳು ಕೇಸ್
ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು ಏಳು ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಂಗೊಡ್ಲದಲ್ಲಿ ಮೂರು ಪ್ರಕರಣ ದಾಖಲಾಗಿದ್ದು 35 ವರ್ಷದ ಮಹಿಳೆ 4 ವರ್ಷದ ಬಾಲಕಿ 14 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ತೆಪ್ಪದ 39 ವರ್ಷದ ಮಹಿಳೆ, ಹೆರವಟ್ಟಾದ 14 ವರ್ಷದ ಬಾಲಕಿ, ಮಾದನಗೇರಿಯ 70 ವರ್ಷದ ವೃದ್ಧ, ಸಂತೆಗುಳಿಯ 35 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಹೊನ್ನಾವರದಲ್ಲಿ ಮೂರು ಕೇಸ್
ಹೊನ್ನಾವರದಲ್ಲಿ ಇಂದು ಮೂರು ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು 35 ವರ್ಷದ ಮಹಿಳೆ, ಆರು ವರ್ಷದ ಬಾಲಕ ಹಾಗೂ ಕರ್ಕಿಯ ಓರ್ವನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶಿರಸಿಯಲ್ಲಿಂದು ಓರ್ವರಿಗೆ ಕೊರೊನಾ
ಶಿರಸಿ ತಾಲೂಕಿನಲ್ಲಿ ಶನಿವಾರ ಒಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿ ಬಿಡುಗಡೆಯಗಿದ್ದಾರೆ.
ಇಂದು ಪಟ್ಟಣದ ಚರ್ಚ್ ರಸ್ತೆಯ ಒಬ್ಬರಿಗೆ ಕೊರೊನಾ ದೃಢವಾಗಿದೆ. ಈವರೆಗೆ 1502 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 1450 ಮಂದಿ ಗುಣಮುಖಗೊಂಡಿದ್ದಾರೆ. 25 ಜನರು ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಲ್ಲಾಪುರದಲ್ಲಿಂದು ಇಬ್ಬರಿಗೆ ಕೊರೊನಾ ದೃಢ
ಯಲ್ಲಾಪುರ: ತಾಲೂಕಿನಲ್ಲಿ ಶನಿವಾರ ಇಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.
ಇಂದು ಜಮಗುಳಿ ಹಾಗೂ ಹುಲ್ಲೋರಮನೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.