ಕುಮಟಾ : ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರವೀಂದ್ರ ಭಟ್ಟ ಸೂರಿಯವರನ್ನು ಶ್ರೀ ರಾಮಚಂದ್ರಾಪುರ ಮಠದ ಹೆಗಡೆ ವಲಯದ ವತಿಯಿಂದ ಇಂದು ಹೆಗಡೆಯ ವಲಯ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಡಿ.ಎನ್.ಭಟ್ಟರವರು ಸನ್ಮಾನಿಸಿ ಮಾತನಾಡಿ, “ಸೂರಿಯವರು ನಮ್ಮ ಸಮಾಜದ ಆಸ್ತಿ, ಅವರ ಸಾಧನೆ ಅನನ್ಯ, ಅವರ ಕಾರ್ಯಕ್ಷಮತೆ ಅಗಾಧವಾದದ್ದು, ರವೀಂದ್ರ ಭಟ್ಟರವರು ಇತರರಿಗೆ ಮಾದರಿ, ಅಂಥವರು ನಮ್ಮ ಜೊತೆಗಿದ್ದಾರೆ ಎಂಬುದು ನಮಗೆ ಹೆಮ್ಮೆ” ಎಂದರು. ಪ್ರೀತಿ ಅಭಿಮಾನವಿಟ್ಟು ಬಂದ ಹಿತೈಷಿಗಳು ಪ್ರೀತಿಯ ಮಾತುಗಳನ್ನಾಡಿ ಸಂಭ್ರಮಿಸಿದರು.
ವಲಯದ ಅಧ್ಯಕ್ಷರಾದ ಉದ್ಯಮಿ ಸಿ.ಜಿ.ನಾರಾಯಣಮೂರ್ತಿ, ವಿಶ್ರಾಂತ ಬ್ಯಾಂಕ್ ಉದ್ಯೋಗಿ ವಿನಾಯಕ ಶಾಸ್ತ್ರಿ, ವಲಯ ಕಾರ್ಯದರ್ಶಿ ಉಮಾಪತಿ, ವಲಯ ಕೋಶಾಧ್ಯಕ್ಷ ಹರಿಶಂಕರ ಹೆಗಡೆ. ಪ್ರಕಾಶ ಹೆಗಡೆ ಮಾತೃ ಪ್ರಧಾನ ಗೋದಾವರಿ ಹೆಗಡೆ, ಗುರಿಕಾರರಾದ ವಿದ್ವಾನ್ ರಾಜೀವ ಭಟ್ಟ, ಪಿ.ಆರ್.ಹೆಗಡೆ, ಆರ್.ಎನ್.ಭಟ್ಟ, ಬಾಲಚಂದ್ರ ಭಾಗ್ವತ, ಅರುಣ ಭಾಗ್ವತ .ಗೀತಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.